ಭಾರತೀಯ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಇಂದು ಭಾನುವಾರ ಪಾಕಿಸ್ತಾನದ ವಿರುದ್ಧ ನಡೆದ ಮಹಿಳಾ ವಿಶ್ವಕಪ್2022 ರಲ್ಲಿ ಆಡುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ಅಲ್ಲದೇ, ಭಾರತದ ಕ್ರಿಕೇಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೇ ಸರಿಗಟ್ಟಿದ್ದಾರೆ.
ಇಂದು ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಅದ್ದೂರಿ ಗೆಲುವು ಸಾಧಿಸಿದೆ. ಈ ತಂಡದಲ್ಲಿ ಆಡುವ ಮೂಲಕ ನಾಯಕಿ ಮಿಥಾಲಿ ರಾಜ್ ಅವರು 6 ವಿಶ್ವಕಪ್ನಲ್ಲಿ ಆಟವಾಡುತ್ತಿರುವ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. 2020 ರಲ್ಲಿ ಮೊದಲ ವಿಶ್ವಕಪ್ ಆಡಿದ ಮಿಥಾಲಿ ಅನಂತರ ನಿರಂತರವಾಗಿ 2005, 2009, 2013, 2017 ಹಾಗೂ 2022 ರಲ್ಲಿ ಭಾರತ ತಂಡ ಪ್ರತಿನಿಧಿಸಿ ಆಡಿದ್ದಾರೆ.
6 ವಿಶ್ವಕಪ್ಗಳಲ್ಲಿ ಆಡಿದ ಭಾರತದ ಎರಡನೇ ಆಟಗಾರ್ತಿಯಾಗಿ ಮಿಥಾಲಿ ರಾಜ್ ಆಗಿದ್ದಾರೆ. ಈ ಮೊದಲು ಸಚಿನ್ ತೆಂಡೂಲ್ಕರ್ ಅವರು 1992, 1996, 1999, 2003, 2017 ಹಾಗೂ 2011 ರಲ್ಲಿ ವಿಶ್ವಕಪ್ ಆಡುವ ಮೂಲಕ ಈ ದಾಖಲೆ ಮಾಡಿದ್ದರು.
ಒಟ್ಟಾರೆಯಾಗಿ ಈ ದಾಖಲೆ ಮಾಡಿದರವಲ್ಲಿ ಮಿಥಾಲಿರಾಜ್ ಮೂರನೆಯವರಾಗಿದ್ದಾರೆ. ಈ ಮೊದಲು ಸಚಿನ್ ಹಾಗೂ ಪಾಕಿಸ್ತಾನದ ಜಾವೇನ್ ಮೇನ್ ಡ್ಯಾಡ್ ಅವರು ಮಾಡಿದ್ದರು.
ಇಂದು ನಡೆದ ವಿಶ್ವಕಪ್ನ ನಲ್ಲಿ ಭಾರತ ತನ್ನ ಮೊದಲ ಎದುರಾಳಿ ಪಾಕಿಸ್ತಾನವನ್ನು ಅನಾಯಾಸವಾಗಿ ಸೋಲಿಸಿದೆ.