ಟಾಟಾ ಐಪಿಎಲ್ 2022 ರ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಭಾನುವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಪಟ್ಟಿಯಂತೆ ಮೊದಲ ಪಂದ್ಯವು ಮಾರ್ಚ್ 26 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ.
ಈ ಎರಡೂ ತಂಡಗಳು ಐಪಿಎಲ್ 2021 ರ ಫೈನಲಿಸ್ಟ್ಗಳಾಗಿದ್ದವು. ಟಾಟಾ ಐಪಿಎಲ್ 2022 ರ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಇದರ ಪ್ರಕಾರ, ಎರಡು ಹೊಸ ಐಪಿಎಲ್ ತಂಡಗಳಾದ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಈ ಪಂದ್ಯ ಮಾರ್ಚ್ 28 ರಂದು ವಾಂಖೆಡೆಯಲ್ಲಿ ನಡೆಯಲಿದೆ.
ಐಪಿಎಲ್ 2022 ರಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ. ಮುಂಬೈ ಮತ್ತು ಪುಣೆಯ ಸ್ಟೇಡಿಯಂಗಳಲ್ಲಿ ಟೂರ್ನಿ ನಡೆಯಲಿದೆ. ಟೂರ್ನಿಯು 65 ದಿನಗಳ ಕಾಲ ನಡೆಯಲಿದ್ದು, ನಾಲ್ಕು ಪ್ಲೇಆಫ್ ಪಂದ್ಯಗಳನ್ನು ಒಳಗೊಂಡಿರುತ್ತದೆ.
🚨 NEWS 🚨: The Board of Control for Cricket in India (BCCI) announced the schedule for #TATAIPL 2022 which will be held in Mumbai and Pune.
A total number of 70 league matches and 4 Playoff games will be played in the duration of 65 days.
More Details 🔽
— IndianPremierLeague (@IPL) March 6, 2022
IPL 2022 ರಲ್ಲಿ 12 ಡಬಲ್ ಹೆಡರ್ (ಒಂದು ದಿನದಲ್ಲಿ ಎರಡು ಪಂದ್ಯಗಳು) ಪಂದ್ಯಗಳು ಇರಲಿವೆ. ಐಪಿಎಲ್ ವೇಳಾಪಟ್ಟಿಯ ಪ್ರಕಾರ ತಲಾ 20 ಪಂದ್ಯಗಳು ವಾಂಖೆಡೆ ಮತ್ತು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಅದೇ ಸಮಯದಲ್ಲಿ, ಪುಣೆಯ ಬ್ರಬೋರ್ನ್ ಮತ್ತು ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಲಾ 15 ಪಂದ್ಯಗಳು ನಡೆಯಲಿವೆ. ಮಧ್ಯಾಹ್ನದ ಪಂದ್ಯಗಳು 3.30ಕ್ಕೆ ಆರಂಭವಾದರೆ, ಸಂಜೆ 7.30ರಿಂದ ಪಂದ್ಯಗಳು ಆರಂಭವಾಗಲಿವೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.