ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಕೇಂದ್ರೀಯ ಮಂಡಳಿಯು ಗುಹಾವಟಿಯಲ್ಲಿ ನಡೆದ 2021-22ರ ಸಾಲಿನ ವಾರ್ಷಿಕ ಸಭೆಯಲ್ಲಿ ಇಪಿಎಫ್ ಬಡ್ಡಿದರವನ್ನು ಇಳಿಕೆ ಮಾಡುವ ಬಗ್ಗೆ ತೀರ್ಮಾನ ಮಾಡಿದೆ.
ಉದ್ಯೋಗಿಗಳ ಭವಿಷ್ಯ ನಿಧಿ (EPF) ಬಡ್ಡಿ ದರವನ್ನು ಸಭೆಯು ಶೇ. 8.5 ರಿಂದ ಶೇ.8.1 ಕ್ಕೆ ಇಳಿಸಲು ತೀರ್ಮಾನಿಸಿದೆ. ಕಳೆದ ನಾಲ್ಕು ದಶಕಗಳ ಬಳಿಕ ಅತ್ಯಂತ ಕಡಿಮೆ ಬಡ್ಡಿ ದರ ನಿಗದಿಮಾಡಲಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್ಒ) ಸುಮಾರು ಐದು ಕೋಟಿ ಗ್ರಾಹಕರಿದ್ದಾರೆ. ಗುವಾಹಟಿಯಲ್ಲಿ ನಡೆದ ಇಪಿಎಫ್ಒ ಕೇಂದ್ರೀಯ ಮಂಡಳಿಯ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮಂಡಳಿಯ ಶಿಫಾರಸನ್ನು ಶೀಘ್ರದಲ್ಲೇ ಹಣಕಾಸು ಸಚಿವಾಲಯಕ್ಕೆ ಕಳುಹಿಸಿ ಅನುಮತಿ ಪಡೆಯಲಾಗುತ್ತದೆ ಎಂದು ತಿಳಿದುಬಂದಿದೆ.