ಗಮನ ಬೇರೆಡೆ ಸೆಳೆದು ಪರ್ಸ್ ಕದಿಯುತ್ತಿದ್ದ ಕಿರುತೆರೆ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ರೂಪಾ ದತ್ತಾ ಬಂಧಿತ ನಟಿ. ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಅಂತಾರಾಷ್ಟಿçÃಯ ಪುಸ್ತಕ ಮೇಳದಲ್ಲಿ ಈಕೆ ಪರ್ಸ್ ಕದ್ದ ಆರೋಪ ಇದೆ.
ಈಕೆ ಪರ್ಸ್ ವೊಂದನ್ನು ಕಸದಬುಟ್ಟಿಗೆ ಎಸೆದಿದ್ದನ್ನು ಪುಸ್ತಕ ಮೇಳದಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಕಾನ್ಸ್ ಸ್ಟೇಬಲ್ ವೊಬ್ಬರು ನೋಡಿದರು. ಬಳಿಕ ನಟಿಯ ವಿಚಾರಣೆಯ ನಡೆಸಿದಾಗ ಆಕೆಯ ಬ್ಯಾಗ್ನಲ್ಲಿ ಹಲವು ಪರ್ಸ್ಗಳು ಮತ್ತು 75 ಸಾವಿರ ರೂಪಾಯಿ ನಗದು ಸಿಕ್ಕಿದೆ.
ಕಿರುತೆರೆ ನಟಿ ರೂಪಾ ದತ್ತಾ ಈ ಹಿಂದೆ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಳು.