ಕಳೆದ ಐದು ವರ್ಷಗಳಲ್ಲಿ ರಕ್ಷಣಾ ವಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅನುದಾನವನ್ನು ಶೇಕಡಾ 4ರಷ್ಟು ಕಡಿತ ಮಾಡಿದೆ. 2017ರಿಂದ 2022ರ ಆರ್ಥಿಕ ವರ್ಷದವರೆಗೂ ಅನುದಾನ ಇಳಿಕೆ ಆಗಿದೆ. ಈ ಬಗ್ಗೆ ರಾಜ್ಯಸಭೆಯಲ್ಲಿ ಸರ್ಕಾರ ಮಾಹಿತಿ ನೀಡಿದೆ.
2017ರಲ್ಲಿ ಒಟ್ಟು ಬಜೆಟ್ನ ಶೇಕಡಾ 17.73, 2018ರಲ್ಲಿ ಶೇ.17.43, 2019ರಲ್ಲಿ ಶೇ.16.86, 2019ರಲ್ಲಿ ಶೇ.13.84, 2020ರಲ್ಲಿ ಶೇ.13.34ರಷ್ಟು, 2021ರಲ್ಲಿ ಶೇ.13.24, ಶೇ.13.31ರಷ್ಟು ಅನುದಾನ ನೀಡಲಾಗಿದೆ.
ಕೇಂದ್ರ ಸರ್ಕಾರ ವೆಚ್ಚದಲ್ಲಿ ಏರಿಳಿತ ಆಗಿದೆಯಾದರೂ, ರಕ್ಷಣಾ ವೆಚ್ಚದಲ್ಲಿ ನಿರಂತರ ಹೆಚ್ಚಳ ಆಗಿದೆ ಎಂದು ರಾಜ್ಯಸಭೆಯಲ್ಲಿ ಕೊಟ್ಟ ಉತ್ತರದಲ್ಲಿ ಸರ್ಕಾರ ಹೇಳಿದೆ.