ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಮಂಗಳೂರಿನ ಪುರಭವನದಲ್ಲಿ ನೇತ್ರದಾನ ಹಾಗೂ ರಕ್ತದಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಕ.ಜಾ.ಪ ಜಿಲ್ಲಾ ಅಧ್ಯಕ್ಷ ಪ್ರವೀಣ್ ಕುಮಾರ್ ಅವರು ಹೇಳಿದ್ದಾರೆ.
ಮಂಗಳೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಜಾನಪದ ಪರಿಷತ್ ದ.ಕನ್ನಡ ಜಿಲ್ಲಾ ಘಟಕ, ಕೋಸ್ಟಲ್ವುಡ್ ಆಕ್ಟರ್ಸ್ ಮತ್ತು ಟೆಕ್ನಿಷಿಯನ್ಸ್ ಕೋ ಅಪರೇಟಿವ್ ಅಸೋಶಿಯೇಷನ್ ಹಾಗೂ ಲಯನ್ಸ್ ಕ್ಲಬ್ ಜಂಟಿಯಾಗಿ ವೆನ್ಲಾಕ್ ಆಸ್ಪತ್ರೆ ಹಾಗೂ ಕೆಎಮ್ಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಮಾರ್ಚ್ 17, ಗುರುವಾರದಂದು ನೇತ್ರದಾನ ಹಾಗೂ ರಕ್ತದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪುರಭವನದಲ್ಲಿ ಈ ಕಾರ್ಯಕ್ರಮ ಬೃಹತ್ ಮಟ್ಟದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲಾ ಸಾರ್ವಜನಿಕರು ಸ್ವ ಇಚ್ಚೆಯಿಂದ ರಕ್ತದಾನ, ನೇತ್ರದಾನ ಹಾಗೂ ಅಂಗಾಂಗದಾನ ಮಾಡಬಹುದಾಗಿದೆ. ಪುರಭವನದಲ್ಲಿ ಕಾರ್ಯಕ್ರಮವು ಬೆಳಗ್ಗೆ 9 ರಿಂದ ಸಂಜೆ 7 ರ ವರೆಗೆ ನಡೆಯಲಿದೆ.
ಈ ಸುದ್ದಿಗೋಷ್ಠಿಯಲ್ಲಿ ಮೋಹನ್ ದಾಸ್ ರೈ ಮಂಗಳೂರು ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ ಸುವರ್ಣ, CATCA (R) ಅಧ್ಯಕ್ಷ ಮೋಹನ್ ಕೊಪ್ಪಳ, CATCA ಪ್ರಧಾನ ಕಾರ್ಯದರ್ಶಿ ರಾಜೇಶ್ SKYLARK, ಸಚಿನ್ ಶೆಟ್ಟಿ ಉಪಾಧ್ಯಕ್ಷ ಪವನ್ ಜೈನ್ ಮತ್ತಿತರರು ಇದ್ದರು.
https://youtu.be/7R_IfHf4X3A