ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ ‘ಜೇಮ್ಸ್’ ಗೆ ಕರ್ನಾಟಕ ರಾಜ್ಯ ತೆರಿಗೆ ಮುಕ್ತ ಮಾಡಬೇಕು ಎಂದು ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ.
ನಾಳೆ ಗುರುವಾರ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದಂದು ಅವರ ಕೊನೆಯ ಚಿತ್ರ ‘ಜೇಮ್ಸ್’ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಅವರ ಲಕ್ಷಾಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈಗಾಗಲೇ ಪುನೀತ್ ಜಯಂತೋತ್ಸವಕ್ಕೆ ಅಭಿಮಾನಿಗಳು ಕರೆ ನೀಡಿದ್ದು, ಸಂಭ್ರಮೋತ್ಸವದಲ್ಲಿ ಮುಳುಗಿದ್ದಾರೆ.
ಈ ಬೆನ್ನಲ್ಲೇ, ಈ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆಯಿಂದ ಮುಕ್ತಿ ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳಬರುತ್ತಿತ್ತು. ಇದೀಗ ಈ ಧ್ವನಿಗೆ ಧ್ವನಿ ಸೇರಿಸಿರುವ ಕಾಂಗ್ರೆಸ್ನ ಹಿರಿಯ ನಾಯಕ ಎಂ.ಬಿ.ಪಾಟೀಲ್ ಜೇಮ್ಸ್ಗೆ ತೆರಿಗೆ ಮುಕ್ತ ಮಾಡಬೇಕು ಎಂದು ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಮ್ಮೆಲ್ಲರ ಪ್ರೀತಿಯ ಅಪ್ಪು, Dr #PuneethRajkumar ಅಭಿನಯದ #James ಸಿನಿಮಾ ಇದೇ ಮಾರ್ಚ್ 17ರಂದು ಬಿಡುಗಡೆಯಾಗುತ್ತಿದೆ. ಅಂದು ಪುನೀತ್ ಅವರ ಜನ್ಮದಿನ ಕೂಡ. ಈ ಚಿತ್ರವನ್ನು ನೋಡಲು ರಾಜ್ಯವೇ ಕಾತುರದಿಂದ ಕಾಯುತ್ತಿದೆ. ಈ ಚಿತ್ರಕ್ಕೆ #TaxFree (ತೆರಿಗೆಮುಕ್ತ) ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಒತ್ತಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.
ನಮ್ಮೆಲ್ಲರ ಪ್ರೀತಿಯ ಅಪ್ಪು, Dr #PuneethRajkumar ಅಭಿನಯದ #James ಸಿನಿಮಾ ಇದೇ ಮಾರ್ಚ್ 17ರಂದು ಬಿಡುಗಡೆಯಾಗುತ್ತಿದೆ. ಅಂದು ಪುನೀತ್ ಅವರ ಜನ್ಮದಿನ ಕೂಡ. ಈ ಚಿತ್ರವನ್ನು ನೋಡಲು ರಾಜ್ಯವೇ ಕಾತುರದಿಂದ ಕಾಯುತ್ತಿದೆ. ಈ ಚಿತ್ರಕ್ಕೆ #TaxFree (ತೆರಿಗೆಮುಕ್ತ) ಮಾಡಬೇಕೆಂದು ಮಾನ್ಯ @CMofKarnataka ಅವರಲ್ಲಿ ಒತ್ತಾಯ ಮಾಡುತ್ತೇನೆ. pic.twitter.com/8hFlkYZjo4
— M B Patil (@MBPatil) March 16, 2022
ಇನ್ನು, ಹಿಂದಿಯ ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆಯಿಂದ ಮುಕ್ತಿ ನೀಡಲಾಗಿದೆ. ಈ ಬೆನ್ನಲ್ಲೇ ಪುನೀತ್ ಅವರ ಕೊನೆಯ ಚಿತ್ರಕ್ಕೂ ತೆರಿಗೆಯಿಂದ ಮುಕ್ತಿ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ.
https://youtu.be/7R_IfHf4X3A