ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಇರುವ ಒಂದಕ್ಕಿಂತ ಹೆಚ್ಚು ಟೋಲ್ಗಳನ್ನು ಇನ್ನು ಮೂರು ತಿಂಗಳೊಳಗೆ ಮುಚ್ಚಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈ ಬಗ್ಗೆ ಲೋಕಸಭೆಯಲ್ಲಿ ಹೇಳಿಕೆ ನೀಡಿದ ಸಚಿವ ಗಡ್ಕರಿ `60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಒಂದಷ್ಟೇ ಟೋಲ್ ಪ್ಲಾಜಾ ಇರುವಂತೆ ನೋಡಿಕೊಳ್ಳುತ್ತೇವೆ ಮತ್ತು ಎರಡನೇ ಟೋಲ್ ಪ್ಲಾಜಾ ಇದ್ದರೆ ಅದನ್ನು ಮುಚ್ಚಲಾಗುತ್ತದೆ’ ಎಂದು ಹೇಳಿದ್ದಾರೆ.
ಟೋಲ್ ಪ್ಲಾಜಾದ ಅಕ್ಕ-ಪಕ್ಕದ ಹಳ್ಳಿಗಳ ನಿವಾಸಿಗಳಿಗೆ ಅವರ ಆಧಾರ್ ಕಾರ್ಡ್ ಆಧಾರದಲ್ಲಿ ಹಸಿರು ಪಾಸ್ ನೀಡುವುದಕ್ಕೂ ಯೋಚನೆ ಮಾಡಲಾಗುತ್ತಿದೆ ಎಂದೂ ಸಚಿವರು ಸದನದಲ್ಲಿ ಹೇಳಿದ್ದಾರೆ.