ತೀವ್ರ ಆರ್ಥಿಕ ಬಿಕ್ಕಟ್ಟಿಗೆ ದಿವಾಳಿ ಆಗಿರುವ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇದೀಗ ಜನಸಾಮಾನ್ಯರು ಇರಲಿ, ಶ್ರೀಮಂತರೇ ಜೀವನ ಮಾಡುವುದು ಕಷ್ಟವಾಗಿದೆ.
ಶ್ರೀಲಂಕಾದ ಐಒಸಿ ತೈಲ ಸಂಸ್ಥೆ ಕಳೆದ ರಾತ್ರಿ ಲೀಟರ್ ಪೆಟ್ರೋಲ್ ಬೆಲೆಯನ್ನು ಏಕ್ ಧಮ್ 49ರೂಪಾಯಿಯಷ್ಟು ಹೆಚ್ಚಳ ಮಾಡಿದೆ.
ಅದರ ಪರಿಣಾಮ ಅಲ್ಲಿ ಲೀಟರ್ ಪೆಟ್ರೋಲ್ ಬೆಲೆ ಈಗ ಬರೋಬ್ಬರಿ 332 ರೂಪಾಯಿ ಆಗಿದ್ದು, ಗ್ರಾಹಕರು ತತ್ತರಿಸಿ ಹೋಗಿದ್ದಾರೆ.
ಹೊಗಲಿ ಇಷ್ಟು ದರ ತೆತ್ತಾದರೂ ಪೆಟ್ರೋಲ್ ಖರೀದಿ ಮಾಡೋಣ ಎಂದರೇ, ಪೆಟ್ರೋಲ್ ಬಂಕ್ ಮುಂದೆ ಲೀಟರ್ ಪೆಟ್ರೋಲ್ ಗೆ ದಿನಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣ ಆಗಿದೆ.
ಜನರ ಆಕ್ರೋಶ ತೀವ್ರಗೊಳ್ಳುತ್ತಿದೆ. ಲಂಕಾ ಸರ್ಕಾರ ಬೀದಿ ಬೀದಿಗಳಲ್ಲಿ ಸೇನೆಯನ್ನು ನಿಯೋಜಿಸಿದೆ.
ಅಂದ ಹಾಗೆ, ಡೀಸೆಲ್ ಬೆಲೆಯಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಲಾಗಿದೆ. ಅಲ್ಲಿ ಈಗಾಗಲೇ ಲೀಟರ್ ಡೀಸೆಲ್ ಬೆಲೆ 230 ರೂಪಾಯಿ ದಾಟಿದೆ.
ನಿನ್ನೆಯಷ್ಟೇ ಭಾರತ ಸರ್ಕಾರ 40ಸಾವಿರ ಟನ್ ಡೀಸೆಲ್ ನೆರವು ಒದಗಿಸಲು ಮುಂದಾಗಿದೆ.