2023 ರ ವೇಳೆಗೆ ಮಹಿಳಾ ಐಪಿಎಲ್ ಅನ್ನು ಪ್ರಾರಂಭಿಸಲು ಬಿಸಿಸಿಐ ಯೋಚಿಸುತ್ತಿದೆ ಎಂದು ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಶುಕ್ರವಾರ ಹೇಳಿದ್ದಾರೆ.
ಮಹಿಳಾ ಐಪಿಎಲ್ ಅನ್ನು ಪ್ರಾರಂಭಿಸದಿದ್ದಕ್ಕಾಗಿ ಈ ಹಿಂದೆ ಟೀಕೆಗೊಳಗಾದ ಬಿಸಿಸಿಐ, ಮುಂದಿನ ಋತುವಿನಲ್ಲಿ ಲೀಗ್ ಅನ್ನು ಪ್ರಾರಂಭ ಮಾಡಲು ಎಜಿಎಂ ಅನುಮೋದನೆಯ ಅಗತ್ಯವಿದೆ. 2023 ರಲ್ಲಿ ಪ್ರಾರಂಭವಾಗುವ ಲೀಗ್ನ ಉದ್ಘಾಟನಾ ಆವೃತ್ತಿಯಲ್ಲಿ ಐದು ಅಥವಾ ಆರು ತಂಡಗಳನ್ನು ಹೊಂದಲು ಮಂಡಳಿಯು ಯೋಚಿಸುತ್ತಿದೆ.
ಶುಕ್ರವಾರ ದೆಹಲಿಯಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಅನ್ನು ಎಜಿಎಂ ಅನುಮೋದಿಸಬೇಕಾಗಿದೆ. ಮುಂದಿನ ವರ್ಷದ ವೇಳೆಗೆ ಪ್ರಾರಂಭಿಸಲು ನಾವು ಯೋಜಿಸಿದ್ದೇವೆ ಎಂದು ಹೇಳಿದರು.
ಈ ಹಿಂದೆ ಫೆಬ್ರವರಿಯಂದು ಸಂದರ್ಶನವೊಂದರಲ್ಲಿ ಗಂಗೂಲಿ ಮಹಿಳಾ ಐಪಿಎಲ್ ಅನ್ನು 2023 ರಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದ್ದರು. ಈ ವರ್ಷದ ಪುರುಷರ ಐಪಿಎಲ್ ನ ಮೊದಲ ಪಂದ್ಯ ಇಂದು ಶನಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿದೆ.
https://youtu.be/ihOEoNnfIT8