ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕೃತ ಟ್ವಿಟ್ಟರ್ ಸಿಎಂ ಆಫ್ ಕರ್ನಾಟಕ (@CMofKarnataka) ಖಾತೆ ಕೆಲವು ನಿಮಿಷಗಳ ಕಾಲ ಹ್ಯಾಕ್ ಆಗಿದೆ.
ಇಂದು ಬೆಳಗ್ಗೆ 6 ಗಂಟೆಯಿಂದ 6.18 ರವರೆಗೆ 18 ನಿಮಿಷಗಳ ಕಾಲ ಟ್ವಿಟ್ಟರ್ ಖಾತೆ ಹ್ಯಾಕ್ ಹಾಗಿರುವ ಬಗ್ಗೆ ಟ್ವೀಟಿಗರು ಅನುಮಾನ ವ್ಯಕ್ತಪಡಿಸಿದ್ದರು. ನೂರಕ್ಕೂ ಹೆಚ್ಚು ಟ್ವೀಟ್ಗಳನ್ನು ಮಾಡಿ ಹ್ಯಾಕ್ ಆಗಿರುವ ಬಗ್ಗೆ ಸಿಎಂ ಟ್ವೀಟ್ ಫಾಲೋವರ್ಸ್ ಮಾಹಿತಿ ಹಂಚಿಕೊಂಡಿದ್ದರು.
ಅಲ್ಲದೇ ಇತ್ತೀಚೆಗೆ ಖಾತೆ ತೆರೆದವರ ಪ್ರೊಫೈಲ್ ಸೇರಿದಂತೆ ಹಲವರನ್ನು ಟ್ಯಾಗ್ ಮಾಡಲಾಗಿತ್ತು ಇದನ್ನು ಗಮನಿಸಿದಾಗ ಹ್ಯಾಕ್ ಆಗಿರುವ ಬಗ್ಗೆ ಅನುಮಾನ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಎಂ ಕಚೇರಿಯ ಸೋಷಿಯಲ್ ಮೀಡಿಯಾ ಟೀಂ, ಎಲ್ಲ ಟ್ವೀಟ್ಗಳನ್ನು ಅಳಿಸಿಹಾಕಿ ಖಾತೆಯನ್ನು ಸರಿಪಡಿಸಿದೆ.
ಮುಖ್ಯಮಂತ್ರಿ @BSBommai ಅವರು ಇಂದು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಸವಣೂರು ತಾಲೂಕಿನ ಚಿಲ್ಲೂರ ಬಡ್ನಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾಧಿಕಾರಿ, ಜಿಲ್ಲೆಯ ಹಿರಿಯಅಧಿಕಾರಿಗಳು, ಗ್ರಾಮದ ಜನ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. pic.twitter.com/wdI7F2YPI3
— CM of Karnataka (@CMofKarnataka) March 26, 2022
ಕೆಲ ತಿಂಗಳ ಹಿಂದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆ ಸೇರಿದಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಟ್ವಿಟ್ಟರ್ ಖಾತೆಯು ಹ್ಯಾಕ್ ಆಗಿತ್ತು.
https://youtu.be/ihOEoNnfIT8