ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಶೇ.40 ರ ಕಮಿಷನ್ ಸರ್ಕಾರ. ಇದು ‘ಬಿಜೆಪಿ ಭ್ರಷ್ಟಾಷಾರದ ಫೈಲ್ಸ್’ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಜ್ಯ ಬಿಜೆಪಿ ಸರ್ಕಾರದ ಶೇ.40 ರ ಕಮಿಷನ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯದ ಗುತ್ತಿಗೆದಾರರು ಏಪ್ರೀಲ್ ಕೊನೆಯ ವಾರದಲ್ಲಿ ಬೃಹತ್ ಪ್ರತಿಭಟನೆ ಮಾಡಲು ಸಿದ್ದತೆ ನಡೆಸುತ್ತಿದ್ದಾರೆ. ಈ ಬಗ್ಗೆ ವರದಿಯೊಂದನ್ನು ತಮ್ಮ ಟ್ವೀಟ್ನೊಂದಿಗೆ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು, ಸಿಎಂ ಬೊಮ್ಮಾಯಿಯವರದು 40 ಪರ್ಸೆಂಟ್ ಸರ್ಕಾರ. ಇದು ‘ಬಿಜೆಪಿ ಭ್ರಷ್ಟಾಚಾರದ ಫೈಲ್ಸ್’ ಕಥೆಯಾಗಿದೆ.
The “40% Commission” Bommai Govt!
The saga of “BJP Corruption Files” -:
• Ministers/MLA’s demand 40% bribes.
• 50,000 Contractors protesting.
• Zero response to July 6 Letter to PM.
• Brazen Loot of Public Money.#40PercentCommissionGovt https://t.co/NW5PM9h0Co— Randeep Singh Surjewala (@rssurjewala) March 28, 2022
ಬೊಮ್ಮಾಯಿ ಸರ್ಕಾರದ ಸಚಿವರು ಹಾಗೂ ಶಾಸಕರು ಶೇ.40 ರ ಲಂಚ ಕೇಳುತ್ತಾರೆ. 50 ಸಾವಿರ ಗುತ್ತಿಗೆದಾರರು ಪ್ರತಿಭಟಿಸುತ್ತಿದ್ದಾರೆ. ಈ ಬಗ್ಗೆ ಜುಲೈ 6 ರಂದೇ ಪ್ರಧಾನಿ ಮೋದಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೇ ಇಲ್ಲ. ಇದು ಸಾರ್ವಜನಿಕ ಹಣದ ಲಜ್ಜೆಗೆಟ್ಟ ಲೂಟಿ ಎಂದು ಆಕ್ರೋಶ ವ್ಯಕ್ತಪಡಿಸಿ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.