ಕೆಲ ತಿಂಗಳ ಹಿಂದೆಯಷ್ಟೇ 45 ವರ್ಷದ ವ್ಯಕ್ತಿಯೊಬ್ಬರು 25 ವರ್ಷದ ಯುವತಿಯನ್ನು ಮದುವೆ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೇ ವೈರಲ್ ಆಗಿತ್ತು. ಆದರೆ ಈ ಸಾಂಸಾರಿಕ ಬದುಕು ಈಗ ದುರಂತ ಅಂತ್ಯ ಕಂಡಿದೆ. 45 ವರ್ಷದ ಆ ವ್ಯಕ್ತಿ ತಮ್ಮ ತೋಟದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಕ್ಕಿಮರಿಪಾಳ್ಯದ ಶಂಕರಪ್ಪ ಆತ್ಮಹತ್ಯೆ ಮಾಡಿಕೊಂಡವರು. 45 ವರ್ಷದ ಇವರು 25 ವರ್ಷದ ಮೇಘನಾ ಎಂಬಾಕೆಯನ್ನು ಮದುವೆ ಆಗಿದ್ದರು.
ಪತಿ-ಪತ್ನಿ ನಡುವೆ ಮೂರು ದಿನಗಳಿಂದ ಗಲಾಟೆ ನಡೆಯುತ್ತಿತ್ತು. ಇದೇ ಸಿಟ್ಟಲ್ಲಿ ಮನೆಯಿಂದ ತೆರಳಿದ್ದ ಶಂಕರಪ್ಪ ತೋಟದ ಮನೆಯಲ್ಲಿ ಸಾವಿಗೆ ಶರಣಾಗಿದ್ದಾರೆ.