ಒಂದಡೆ ಕೋವಿಡ್ ಸೋಂಕಿನ ಕಾರಣದಿಂದ ಭಾರತದಲ್ಲಿ 2 ವರ್ಷದಿಂದ ಜಾರಿಯಲ್ಲಿದ್ದ ಕೋವಿಡ್ ನಿರ್ಬಂಧಗಳನ್ನು ವಾಪಸ್ ಪಡೆದಿದ್ದರೆ, ಅತ್ತ ಪಕ್ಕದ ಚೀನಾದ ವ್ಯಾಪಾರಿ ನಗರಿ ಶಾಂಘೈನಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಶಾಂಘೈ ನಗರಿಯಲ್ಲಿ ಲಾಕ್ಡೌನ್ ಹೇರಲಾಗಿದ್ದು, ಜನರು ಮನೆಯಿಂದ ಹೊರಹೋಗದಂತೆ ನಿರ್ಬಂಧ ಹೇರಲಾಗಿದೆ. ಕೇವಲ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲ್ಲಷ್ಟೇ ಜನ ಮನೆಯಿಂದ ಹೊರಬರಲು ಅವಕಾಶ ನೀಡಲಾಗಿದೆ.
ಶಾಂಘೈ ನಗರಿಯಲ್ಲಿ ಇವತ್ತು 4,477 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿವೆ.
ಶಾAಘೈಯಲ್ಲಿ 2.5 ಕೋಟಿ ಜನರು ವಾಸವಾಗಿದ್ದು, ಮತ್ತೆ ಕೋವಿಡ್ ಸೋಂಕು ಹೆಚ್ಚಳದ ಕಾರಣದಿಂದ ಎರಡು ಹಂತಗಳಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ. 4 ದಿನಗಳ ಕಾಲ ನಗರದಲ್ಲಿ ಲಾಕ್ಡೌನ್ ಹೇರಲಾಗಿದೆ. ತಮ್ಮ ಮನೆಯ ಆವರಣದಲ್ಲೂ ಜನರು ನಡೆದಾಡುವಂತಿಲ್ಲ ಎಂಬ ಕಠಿಣ ನಿರ್ಬಂಧ ಹೇರಲಾಗಿದೆ. 2.5 ಕೋಟಿ ಜನರಿಗೆ ಕೋವಿಡ್ ಜನರಿಗೆ ಕೋವಿಡ್ ಟೆಸ್ಟ್ ಮಾಡುವ ಸಲುವಾಗಿ ಈ ಕಠಿಣ ಕ್ರಮಕೈಗೊಳ್ಳಲಾಗಿದೆ.
ಶಾಂಘೈನಲ್ಲಿ ಲಾಕ್ಡೌನ್ ಘೋಷಣೆ – ಮನೆಯಿಂದ ಹೊರಬರುವಂತಿಲ್ಲ