ಅಧಿಕಾರಿ ವಿರುದ್ಧ ಜಾತಿ ನಿಂದನೆ ಆರೋಪದ ಮೇರೆಗೆ ತಮಿಳುನಾಡು ಸಾರಿಗೆ ಸಚಿವ ಸ್ಥಾನದಿಂದ ಆರ್ ಎಸ್ ರಾಜಕಣ್ಣಪ್ಪನ್ ಅವರನ್ನು ಮಂಗಳವಾರ ವಜಾಗೊಳಿಸಲಾಗಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಶಿಫಾರಸ್ಸಿನ ಮೇರೆಗೆ ಆರ್ ಎಸ್ ರಾಜಕಣ್ಣಪ್ಪನ್ ನಿರ್ವಹಿಸುತ್ತಿದ್ದ ಸಾರಿಗೆ ಖಾತೆಯನ್ನು ಇನ್ಮುಂದೆ ಸಚಿವ ಎಸ್ ಎಸ್ ಶಿವಶಂಕರ್ ನಿರ್ವಹಿಸಲಿದ್ದಾರೆ ಎಂದು ರಾಜಭವನ ಪ್ರಕಟಣೆ ತಿಳಿಸಿದೆ.
ಶಿವಶಂಕರ್ ಅವರು ಹೊಂದಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ರಾಜಕಣ್ಣಪ್ಪನವರಿಗೆ ಹಂಚಿಕೆ ಮಾಡಲಾಗಿದೆ. ಮೇ 2021 ರಲ್ಲಿ ಡಿಎಂಕೆ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಖಾತೆ ಬದಲಾವಣೆ ಪ್ರಕ್ರಿಯೆ ನಡೆದಿದೆ.