ರೈತರು, ಸಹಕಾರ ಸಂಸ್ಥೆಗಳ ಸದಸ್ಯರು ಮತ್ತು ಅವರ ಕುಟುಂಬಸ್ಥರಿಗೆ ಆರೋಗ್ಯ ವಿಮೆ ಒದಗಿಸುವ ಯಶಸ್ವಿನಿ ಯೋಜನೆಗೆ ರಾಜ್ಯದಲ್ಲಿ ಮರುಚಾಲನೆ ಸಿಕ್ಕಿದೆ. ಈ ಸಂಬಂಧ ಗುರುವಾರ ಸಹಕಾರ ಇಲಾಖೆ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ನಲ್ಲಿ ಘೋಷಿಸಿದಂತೆ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯನ್ನು ಮರು ಜಾರಿ ಮಾಡಲಾಗಿದೆ.
ಯಶಸ್ವಿನಿ ಟ್ರಸ್ಟ್ ಪುನರ್ ರಚನೆ ಮಾಡಿ, ಆಡಳಿತ ನಿಯಂತ್ರಣ, ಸದಸ್ಯತ್ವ ನೋಂದಣಿ, ಚಿಕಿತ್ಸೆ ಪಟ್ಟಿ, ದರಪಟ್ಟಿ, ಸೇವಾ ಸಮಾಲೋಚಕರ ನೇಮಕ ಪ್ರಕ್ರಿಯೆ ಆರಂಭಿಸುವಂತೆ ಆದೇಶ ಹೊರಡಿಸಲಾಗಿದೆ.
ರೈತರ ಆರೋಗ್ಯದ ದೃಷ್ಟಿಯಿಂದ ಯಶಸ್ವಿನಿ ಯೋಜನೆಯನ್ನು ಮತ್ತೆ ಆರಂಭಿಸಿದ್ದೇವೆ. ಇದಕ್ಕೆ 300 ಕೋಟಿ ಮೀಸಳಿದಲಾಗಿದೆ. ಎರಡು ವಾರದಲ್ಲಿ ಯೋಜನೆ ಕಾರ್ಯರಂಭ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
2003ರಲ್ಲಿ ಯಶಸ್ವಿನಿ ಆರೋಗ್ಯ ವಿಮೆ ಯೋಜನೆ ಆರಂಭಿಸಲಾಗಿತ್ತು.14 ವಿಭಾಗಗಳಲ್ಲಿ 823 ವಿಧದ ಶಸ್ತ್ರ ಚಿಕಿತ್ಸೆಗಳಿಗೆ ನಗದುರಹಿತ ಸೌಲಭ್ಯ ಇತ್ತು. ಆದರೇ,2018ರಲ್ಲಿ ಯಶಸ್ವಿನಿ ಯೋಜನೆಯನ್ನು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ವಿಲೀನ ಮಾಡಲಾಗಿತ್ತು.