ICU ಅಂದರೆ ಇಂಟನ್ಸಿವ್ ಕೇರ್ ಯೂನಿಟ್. ರೋಗಿಗಳಿಗೆ ತುರ್ತು, ಅತ್ಯವಸರ ಚಿಕಿತ್ಸೆ ನೀಡಿ ಬದುಕಿಸುವ ಘಟಕ.. ಆದರೇ, ತೆಲಂಗಾಣದ ವರಂಗಲ್ ನಲ್ಲಿರುವ MGM ಆಸ್ಪತ್ರೆಯಲ್ಲಿ ಪರಿಸ್ಥಿತಿ ದಾರುಣವಾಗಿದೆ.
ಇಲ್ಲಿನ RICU ನಲ್ಲಿ ಇಲಿಗಳ ಸಾಮ್ರಾಜ್ಯವೇ ಇದೆ. ರೋಗಿಗಳ ಮೇಲೆ ಇಲಿಗಳು ದಂದಯಾತ್ರೆ ಮಾಡುತ್ತಿವೆ. ಸಿಕ್ಕಸಿಕ್ಕಲ್ಲೆಲ್ಲಾ ಕಚ್ಚಿ ಗಾಯಗೊಳಿಸುತ್ತಿವೆ.
ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಹನುಮಕೊಂಡದ ರೋಗಿಯೊಬ್ಬರನ್ನು RICU ಗೆ ದಾಖಲಿಸಲಾಗಿತ್ತು. ಅವರು ಅರೆಪ್ರಜ್ಞಾವಸ್ಥೆಯಲ್ಲಿ ಇದ್ದಾಗ ಕಳೆದ ರಾತ್ರಿ ಇಲಿಗಳು ದಾಳಿ ಮಾಡಿವೆ. ರೋಗಿಯ ಕೈಕಾಲಿಗೆ ಕಚ್ಚಿವೆ. ರೋಗಿ ಅರೆಪ್ರಜ್ಞಾವಸ್ಥೆಯಲ್ಲಿ ಕಾರಣ ಇದು ಅವರ ಅರಿವಿಗೆ ಬಂದಿಲ್ಲ. ಆದರೇ ರಕ್ತ ಸೋರುವುದನ್ನು ನೋಡಿದ ರೋಗಿ ಸಂಬಂಧಿ ವೈದ್ಯರ ಗಮನಕ್ಕೆ ತಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಯಥಾ ಪ್ರಕಾರ, ಪಾಳಿಯಲ್ಲಿದ್ದ ವೈದ್ಯರ ಮೇಲೆ ಕ್ರಮ ಆಗಿದೆ. ಅಧೀಕ್ಷಕರನ್ನು ಬದಲಿಸಲಾಗಿದೆ