ಖಾದ್ಯ ತೈಲ, ಅಡುಗೆ ಎಣ್ಣೆ, ಗ್ಯಾಸ್, ಇಂಧನ, ವಿದ್ಯುತ್ ಹಾಗೂ ಇತರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿರುವುದರಿಂದ ಬೆಂಗಳೂರಿನ ಹೋಟೆಲ್ ಸಂಘ ಸೋಮವಾರ 10 ಪ್ರತಿಶತ ಬೆಲೆ ಹೆಚ್ಚಳ ಮಾಡಲು ನಿರ್ಧರಿಸಿವೆ.
ಮುಂದಿನ ವಾರದಿಂದ ರೆಸ್ಟೋರೆಂಟ್ಗಳಲ್ಲಿನ ಊಟ ಹಾಗೂ ತಿನಿಸುಗಳ ಮೇಲೆ 10 ಪ್ರತಿಶತದಷ್ಟು ಬೆಲೆ ಹೆಚ್ಚಳ ಮಾಡುವುದಾಗಿ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಊಟ ರೆಡಿ ಮಾಡಲು ಬಳಸುವ ಕಾಧ್ಯ ತೈಲಗಳೂ, ಅಡುಗೆ ಎಣ್ಣೆ, ಗ್ಯಾಸ್, ಇಂಧನ, ವಿದ್ಯುತ್, ಸೇರಿದಂತೆ ಅಗತ್ಯ ಮೂಲ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬೆಲೆ ಹೆಚ್ಚಳ ಬಿಟ್ಟು ನಮಗೆ ಬೇರೆ ಯಾವುದೇ ದಾರಿಗಳಿಲ್ಲ. ಕಟ್ಟಡದ ಬಾಡಿಗೆ ಹಾಗೂ ನೌಕರರ ಸಂಬಳವೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೊರೋನಾ ಸಾಂಕ್ರಾಮಿಕದಿಂದ ಹೋಟೆಲ್ ಉದ್ಯಮ ಇದುವರೆಗೂ ಚೇತರಿಸಿಕೊಂಡಿಲ್ಲ. ಆದ್ದರಿಂದಾಗಿ ಹೋಟೆಲ್ ಸಂಘದ ಸದಸ್ಯರು ಬೆಲೆ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಹೋಟೆಲ್ ಸಂಘ 10 ಪ್ರತಿಶತದಷ್ಟು ಬೆಲೆ ಹೆಚ್ಚಳ ಮಾಡಲು ನಿರ್ಧರಿಸಿದೆ. ವೈಯಕ್ತಿಕವಾಗಿ ಹೋಟೆಲ್ ಮಾಲೀಕರು ಮತ್ತಷ್ಟು ಬೆಲೆ ಹೆಚ್ಚಳ ಮಾಡಬಹುದು. ಮುಂದಿನ ದಿನಗಳಲ್ಲಿ ಹಾಲಿನ ದರವೂ ಹೆಚ್ಚಳವಾಗುತ್ತಿರುವುದರಿಂದ ಬೆಲೆ ಹೆಚ್ಚಳ ಅನಿವಾರ್ಯ ಎಂದಿದ್ದಾರೆ.
ಈಗಾಗಲೇ ಬಹುತೇಕ ಹೋಟೆಲ್ ಮಾಲೀಕರು ತಿಂಡಿ ಹಾಗೂ ಊಟದ ಬೆಲೆಯನ್ನು ಹೆಚ್ಚಿಸಿದ್ದಾರೆ. ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಇನ್ನೂ ಮುಂದುವರೆಯುತ್ತಲೇ ಇದೆ.