ಮೋದಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಮತ್ತೆ ಏರಿಕೆ ಕಂಡಿವೆ. ದಾಖಲೆ ಪ್ರಮಾಣದಲ್ಲಿ ಏರಿದ ತೈಲ ಬೆಲೆಗೆ ವಾಹನ ಸವಾರರು ತತ್ತರಿಸಿದ್ದಾರೆ.
ಬುಧವಾರ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ 80 ಪೈಸೆ ಏರಿಕೆ ಮಾಡಲಾಗಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ Rs 111.29 ಆಗಿದ್ದರೆ, ಡೀಸೆಲ್ ಬೆಲೆ Rs 95.83 ರೂಪಾಯಿ ಆಗಿದೆ.
ರಾಜ್ಯ ಮಟ್ಟದಲ್ಲಿ ಉತ್ತರಕನ್ನಡದ ಶಿರಸಿಯಲ್ಲಿ ಅತೀ ಹೆಚ್ಚು ದರ ಇದೆ. ಅಲ್ಲಿ ಲೀಟರ್ ಪೆಟ್ರೋಲ್ ಬೆಲೆ 113ರೂಪಾಯಿಯ ಗಡಿ ದಾಟಿದೆ.
16 ದಿನದಲ್ಲಿ 14ನೇ ಬಾರಿ ತೈಲ ಬೆಲೆ ಹೆಚ್ಚಾಗಿದೆ. ಈ ಅವಿಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಲಾ 10 ರೂಪಾಯಿ ಹೆಚ್ಚಾಗಿದೆ.
ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ Rs 105.11 ಆಗಿದ್ದರೆ, ಡೀಸೆಲ್ ಬೆಲೆ Rs 96.67 ರೂಪಾಯಿ ಆಗಿದೆ.
ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 120 ರೂಪಾಯಿ ದಾಟಿದೆ. ಲೀಟರ್ ಬೆಲೆ ಅಲ್ಲಿ Rs 120.47 ಆಗಿದ್ದರೆ, ಅಲ್ಲಿ ಡೀಸೆಲ್ ಬೆಲೆ 104.72 ರೂಪಾಯಿ ಇದೆ.