ತುಮಕೂರು- ಬೆಂಗಳೂರು ರೈಲು ಪ್ರಯಾಣಿಕರಿಗೆ ಒಂದು ಗುಡ್ ನ್ಯೂಸ್ ನೀಡಿದೆ ರೈಲ್ವೆ ಇಲಾಖೆ. ಏಪ್ರಿಲ್ 8ರಿಂದ ತುಮಕೂರು- ಬೆಂಗಳೂರು ನಡುವೆ ಮೆಮು ರೈಲು ಓಡಲಿದೆ.
ತುಮಕೂರು- ಬೆಂಗಳೂರು ನಡುವೆ ವಿದ್ಯುದೀಕರಣ ಕೆಲಸ ಪೂರ್ಣಗೊಂಡಿದೆ. ಈ ಎರಡು ನಗರಗಳ ನಡುವೆ ಡೆಮು ರೈಲು ಬದಲಿಗೆ ಮೆಮು ರೈಲು ಸಂಚಾರ ಏಪ್ರಿಲ್ 8ರಿಂದ ಆರಂಭವಾಗಲಿದೆ.
ತುಮಕೂರು – ಯಶವಂತಪುರ ನಡುವೆ ಇಷ್ಟು ದಿನ 8 ಬೋಗಿಗಳ ಡೆಮು ರೈಲು ಸಂಚರಿಸುತ್ತಿತ್ತು. ಈಗ 16 ಬೋಗಿಗಳ ಮೆಮು ರೈಲು ಓಡಲಿದೆ.
ಮೆಮು ರೈಲು ಸಂಚಾರ ಸಮಯ
# KSR ನಿಂದ ತುಮಕೂರು ಕಡೆಗೆ ಬೆಳಗ್ಗೆ 9.30ಕ್ಕೆ ಮೆಮು ರೈಲು ಹೊರಡಲಿದ್ದು ಬೆಳಗ್ಗೆ 11ಗಂಟೆಗೆ ತುಮಕೂರು ತಲುಪಲಿದೆ
# ಬೆಳಗ್ಗೆ 11.15 ಇದೆ ರೈಲು ತುಮಕೂರಿನಿಂದ ಹೊರಟು ಮಧ್ಯಾಹ್ನ 1.25ಕ್ಕೆ KSR ನಿಲ್ದಾಣ ತಲುಪಿಲಿದೆ.
# ಮಧ್ಯಾಹ್ನ 1.50ಕ್ಕೆ KSR ನಿಂದ ಹೊರಟು ಮಧ್ಯಾಹ್ನ 3.20ಕ್ಕೆ ತುಮಕೂರು ತಲುಪಲಿದೆ
# ಇದೆ ರೈಲು ಮಧ್ಯಾಹ್ನ 3.50ಕ್ಕೆ ತುಮಕೂರಿನಿಂದ ಹೊರಟು ಸಂಜೆ 5.25ಕ್ಕೆ KSR ನಿಲ್ದಾಣ ತಲುಪಿಲಿದೆ.