ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಮುಖ್ಯ ಅಡುಗೆಯವರು ಮತ್ತು ಅಡುಗೆ ಸಹಾಯಕರ ಮಾಸಿಕ ಗೌರವ ಸಂಭಾವನೆ ಹೆಚ್ಚಿಸಿ ಸರ್ಕಾರ ಆದೇಶ ಮಾಡಿದೆ.
ಬಜೆಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದಂತೆ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಅಡುಗೆಯವರು ಮತ್ತು ಅಡುಗೆ ಸಹಾಯಕರ ಮಾಸಿಕ ಗೌರವ ಸಂಭಾವನೆಯನ್ನು ತಲಾ 1000 ಹೆಚ್ವಳ ಮಾಡಿರುವ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ವೇತನ ಹೆಚ್ಚಳದ ಬಳಿಕ ಮುಖ್ಯ ಅಡುಗೆಯವರ ಗೌರವ ಸಂಭಾವನೆ 3700 ರೂಪಾಯಿ. ಅಡುಗೆ ಸಹಾಯಕರ ವೇತನ 3600 ರೂಪಾಯಿ ಆಗಿದೆ. ಈ ಗೌರವ ಸಂಭಾವನೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಾವತಿ ಆಗಲಿದೆ.