`ನನಗೆ ಝೀರೋ ಟ್ರಾಫಿಕ್ ಬೇಡ, ನಾನು ಸಾಮಾನ್ಯ ಜನರ ಸಿಎಂ’ ಎಂದು ಮುಖ್ಯಮಂತ್ರಿ ಆದ ಆರಂಭದಲ್ಲಿ ಹೇಳಿಕೊಂಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿನ್ನೆ ಮಂಗಳೂರಿನ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಂಗಳೂರಿನ ವಾಹನ ಸವಾರರು 2 ಗಂಟೆ ರಸ್ತೆಯಲ್ಲೇ ಪರದಾಡಿ ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಆಕ್ರೋಶ ಹೊರಹಾಕಿದರು.
ಮುಖ್ಯಮಂತ್ರಿ ಬೊಮ್ಮಾಯಿ ನಿನ್ನೆ ರಾತ್ರಿ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಾಗುವ ಮಾರ್ಗದಲ್ಲಿ ಪೊಲೀಸರು 2 ಗಂಟೆ ಜನಸಾಮಾನ್ಯರ ವಾಹನಗಳನ್ನು ತಡೆದು ನಿಲ್ಲಿಸಿದರು. ನಿನ್ನೆ ಮಳೆಯಲ್ಲಿ ನೆನೆಯುತ್ತಲೇ ಮಂಗಳೂರಿಗರು ಎರಡು ಗಂಟೆ ಟ್ರಾಫಿಕ್ನಲ್ಲೇ ಕಾಲ ಕಳೆಯಬೇಕಾಯಿತು.
ಮುಖ್ಯಮಂತ್ರಿಯನ್ನು ಜಾತ್ರೆಗೆ ಕರೆಯುವ ಅಗತ್ಯ ಏನಿತ್ತು..? ಎಂದು ಜನರು ಆಕ್ರೋಶ ಹೊರಹಾಕಿದರು.