ಬೆಳಗಾವಿ ಮೂಲದ ಬಿಜೆಪಿ ಕಾರ್ಯಕರ್ತರೂ ಆಗಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಸಚಿವ ಈಶ್ವರಪ್ಪ ಅವರು ಎ1(ಮೊದಲ ಆರೋಪಿ) ಆಗಿದ್ದಾರೆ.
ಸಚಿವ ಈಶ್ವರಪ್ಪ ಅವರ ಆಪ್ತ ಬಸವರಾಜ್ ಎ2 ಆರೋಪಿ, ರಮೇಶ್ ಎ3 ಆರೋಪಿ ಆಗಿದ್ದು, ಇತರರು ಎ4 ಆರೋಪಿಗಳಾಗಿದ್ದಾರೆ. ಉಡುಪಿ ನಗರದ ಶಾಂಭವಿ ಲಾಡ್ಜ್ ಕೋಣೆ ಸಂಖ್ಯೆ 207ರಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡ್ಕೊಂಡಿದ್ದರು.
ಐಪಿಸಿ ಸೆಕ್ಷನ್ 34 (ಹಲವರ ಜೊತೆ ಸೇರಿ ಕೃತ್ಯ ಎಸಗುವುದು) ಮತ್ತು 306ರಡಿ (ಆತ್ಮಹತ್ಯೆ ಮಾಡಿಕೊಂಡ ಅಪರಾಧ) ಎಫ್ಐಆರ್ ದಾಖಲಾಗಿದೆ.
ಸಚಿವ ಈಶ್ವರಪ್ಪ ವಿರುದ್ಧ ಶೇಕಡಾ 40ರಷ್ಟು ಕಮಿಷನ್ ಕೇಳಿರುವ ಬಗ್ಗೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತು ದೆಹಲಿ ಮಟ್ಟದ ಬಿಜೆಪಿ ನಾಯಕರಿಗೆ ದೂರು ನೀಡಿದ್ದಾಗಿಯೂ ಮನವಿ ನೀಡಿದರೂ ಸಚಿವ ಈಶ್ವರಪ್ಪ, ಆಪ್ತರಾದ ಬಸವರಾಜ್, ರಮೇಶ್ ಬಿಲ್ ಮಂಜೂರು ಮಾಡದ ಕಾರಣ ಮನನೊಂದು ತನ್ನ ಮೊಬೈಲ್ನ ವಾಟ್ಸಾಪ್ ಮೂಲಕ ಮಾಧ್ಯಮಗಳಿಗೆ ಆಪ್ತರಿಗೆ ಸಂದೇಶ ಕಳುಹಿಸಿ ಅನುಮಾನಾಸ್ಪದ ಸಾವು ಆಗಿದ್ದು, ಈ ಸಾವಿಗೆ ಕಾರಣರಾದ ಕೆ ಎಸ್ ಈಶ್ವರಪ್ಪ, ಬಸವರಾಜ್, ರಮೇಶ್ ಮತ್ತು ಇತರರ ವಿರುದ್ಧ ಕಾನೂನು ಕ್ರಮ ಜರುಗಿಸಿ
ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಲಾಗಿದ್ದು, ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ.