ವಿಶ್ವದಾದ್ಯಂತ ಬಹು ನಿರೀಕ್ಷೆ ಹೊಂದಿದ್ದ ಕೆಜಿಎಫ್-2 ಚಿತ್ರ ಇಂದು ವಿಶ್ವಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿದೆ. ರಾಕಿ ಬಾಯ್ ಯಶ್ ಅವರ ಅಭಿಮಾನಿಗಳ ಕುತೂಹಲಕ್ಕೆ ಇಂದು ತೆರೆಬಿದ್ದಿದೆ. ಈಗಾಗಲೇ ಚಿತ್ರ ಅಭಿಮಾನಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದು ಮುನ್ನುಗ್ಗುತ್ತಿದೆ.
ಇದೀಗ ಈ ಚಿತ್ರಕ್ಕೆ ದಿವಂಗತ್ ನಟ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಶುಭಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಕೆ.ಜಿ.ಎಫ್ – ಚಾಪ್ಟರ್ 2’ ವಿಶ್ವದಾದ್ಯಂತ ಕನ್ನಡ ಚಿತ್ರರಂಗದ ಸಂಭ್ರಮ, ಪರಂಪರೆ, ಮೌಲ್ಯ ಮತ್ತು ಸಾಮರ್ಥ್ಯದ ಬಗ್ಗೆ ಇತಿಹಾಸ ಬರೆಯಲಿರುವ ಚಿತ್ರ. ಇಡೀ ಚಿತ್ರತಂಡಕ್ಕೆ ಶುಭಕೋರುತ್ತೇನೆ ಎಂದು ಹೇಳಿದ್ದಾರೆ.
'ಕೆ.ಜಿ.ಎಫ್ – ಚಾಪ್ಟರ್ 2', ವಿಶ್ವದಾದ್ಯಂತ ಕನ್ನಡ ಚಿತ್ರರಂಗದ ಸಂಭ್ರಮ, ಪರಂಪರೆ, ಮೌಲ್ಯ ಮತ್ತು ಸಾಮರ್ಥ್ಯದ ಬಗ್ಗೆ ಇತಿಹಾಸ ಬರೆಯಲಿರುವ ಚಿತ್ರ.
ಇಡೀ ಚಿತ್ರತಂಡಕ್ಕೆ ಶುಭಕೋರುತ್ತೇನೆ.@VKiragandur @prashanth_neel @TheNameIsYash pic.twitter.com/PUXjQOYU5R— Ashwini Puneeth Rajkumar (@Ashwini_PRK) April 14, 2022
ಕನ್ನಡದ ಕೆಜಿಎಫ್ ಚಿತ್ರ ಇಂದು ಇಡೀ ದೇಶಾದ್ಯಂತ ಆವರಿಸಿದ್ದಲ್ಲದೇ ವಿಶ್ವದ ಹಲವು ಭಾಗಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗವನ್ನು ಈ ಚಿತ್ರ ಮತ್ತೊಂದು ಸ್ತರಕ್ಕೆ ಕೊಂಡೊಯ್ದಿದೆ. ಈ ಚಿತ್ರಕ್ಕೆ ಕನ್ನಡ ಚಿತ್ರರಂಗದ ಹಲವು ನಾಯಕರು ಶುಭಕೋರಿದ್ದಾರೆ.
ಈ ಹಿಂದೆ, ನಟ ಪುನೀತ್ ರಾಜ್ಕುಮಾರ್ ಅವರು ಯಶ್ ನಟನೆಯ ಕೆಜಿಎಫ್-1 ಚಿತ್ರಕ್ಕೆ ವೀಡಿಯೋ ಮಾಡಿ ಶುಭಕೋರಿದ್ದರು.