ಸೆಲೆಬ್ರಿಟಿಗಳು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದು ಕಾಮನ್ ಆಗಿಬಿಟ್ಟಿದೆ. ಹೈದರಾಬಾದ್ನಲ್ಲಿ ಸ್ಟಾರ್ ಹೀರೋ ಪ್ರಭಾಸ್ ಕಾರ್ಗೆ 1450 ರೂಪಾಯಿ ದಂಡ ವಿಧಿಸಿದ್ದಾರೆ.
ಜೂಬ್ಲಿಹಿಲ್ಸ್ನ ರೋಡ್ ನಂ.36ರಲ್ಲಿ ಬ್ಲಾಕ್ ಫ್ರೇಮ್ನೊಂದಿಗೆ ವೇಗವಾಗಿ ತೆರಳುತ್ತಿದ್ದ ಕಾರನ್ನು ಟ್ರಾಫಿಕ್ ಪೊಲೀಸರು ತಡೆದು ಪರಿಶೀಲಿಸಿದ್ದಾರೆ. ಆ ಕಾರು ನಟ ಪ್ರಭಾಸ್ಗೆ ಸೇರಿದ್ದು ಎಂದು ತಿಳಿದುಬಂದಿದೆ.

ಈ ಕಾರ್ ಗೆ ನಂಬರ್ ಪ್ಲೇಟ್ ಸರಿಯಾಗಿ ಇರಲಿಲ್ಲ. ಎಪಿ ಸ್ಟಿಕ್ಕರ್, ಬ್ಲಾಕ್ ಫ್ರೇಮ್ ಕೂಡ ಇತ್ತು. ಹೀಗಾಗಿ ಟ್ರಾಫಿಕ್ ಪೊಲೀಸರು 1450 ರೂಪಾಯಿ ಜುಲ್ಮಾನೆ ವಿಧಿಸಿದ್ದಾರೆ. ಈ ಸಂದರ್ಭದಲ್ಲಿ ಕಾರ್ನಲ್ಲಿ ನಟ ಪ್ರಭಾಸ್ ಇರಲಿಲ್ಲ.
ಸೆಲೆಬ್ರಿಟಿಗಳು ರೂಲ್ಸ್ ಬ್ರೇಕ್ ಮಾಡುವುದು ಹೊಸದೇನು ಅಲ್ಲ. ಈ ಹಿಂದೆ ಎನ್ಟಿಆರ್, ಮಂಚು ಮನೋಜ್ ಅವರ ಕಾರ್ಗಳಿಗೂ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದರು.