ಬಿಜೆಪಿ ಸರ್ಕಾರದ ಹಲವು ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬರುತ್ತಿರುವ ನಡುವೆಯೇ ಕರ್ನಾಟಕದಲ್ಲಿ ನಡೆದಿರುವ 545 ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣ ಸಂಬAಧ ಸಿಐಡಿ ತಂಡ ಬಿಜೆಪಿ ನಾಯಕಿ ದಿವ್ಯಾ ಹಾರಂಗಿ ಮನೆ ಮೇಲೆ ದಾಳಿ ನಡೆಸಿದೆ.
ಕಲಬುರಗಿಯಲ್ಲಿರುವ ಬಿಜೆಪಿ ನಾಯಕಿ ದಿವ್ಯಾ ಹಾರಂಗಿ ಅವರ ಮನೆ ಹಾಗೂ ಅವರ ಮಾಲೀಕತ್ವದ ಜ್ಞಾನ ಜ್ಯೋತಿ ಸಂಸ್ಥೆಯಲ್ಲಿ ಸಿಐಡಿ ಶೋಧ ಕೈಗೊಂಡಿದ್ದು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಕಲಬುರಗಿ ಸಿಐಡಿ ಎಸ್ಪಿ ರಾಘವೇಂದ್ರ ಭಟ್ ನೇತೃತ್ವದಲ್ಲಿ ದಾಳಿ ನಡೆದಿದೆ.
ದಾಳಿ ವೇಳೆ ಬಿಜೆಪಿ ನಾಯಕಿ ದಿವ್ಯಾ ಹಾರಂಗಿ ನಾಪತ್ತೆ ಆಗಿದ್ದಾರೆ. ಈಕೆಯ ಗಂಡ ರಾಜೇಶ್ ಹಾರಂಗಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
21 ಪ್ರಶ್ನೆ 100 ಅಂಕ..!
ಇದೇ ಪರೀಕ್ಷಾ ಕೇಂದ್ರದಲ್ಲಿ ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿ ವೀರೇಶ್ 21 ಪ್ರಶ್ನೆಗಳಿಗೆ ಉತ್ತರಿಸಿ 100 ಅಂಕಗಳನ್ನು ಪಡೆದಿದ್ದ. ಆತನನ್ನೂ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಆರು ಮಂದಿ ಬಂಧನ:
ಪಿಎಸ್ಐ ನೇಮಕಾತಿ ಹಗರಣ ಸಂಬAಧ ಪೊಲೀಸರು ಶನಿವಾರ ಆರು ಮಂದಿಯನ್ನು ಬಂಧಿಸಿದ್ದಾರೆ. ಅವರಲ್ಲಿ ರಾಯಚೂರು ಮೂಲದ ಪ್ರವೀಣ್ ಕುಮಾರ್, ರಾಯಚೂರು ಜಿಲ್ಲಾ ಕಾರಾಗೃಹದ ಜೈಲ್ ವಾರ್ಡನ್ ಚೇತನ್ ನಂದಗಾAವ್, ಅಭ್ಯರ್ಥಿ ಸಿದ್ದಮ್ಮ ಮತ್ತು ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕರಾಗಿದ್ದ ಸುಮಾ ಎಂಬವರನ್ನು ಬಂಧಿಸಲಾಗಿದೆ.
ಆರೋಪಿತೆಯ ಮನೆಗೆ ಗೃಹ ಸಚಿವರ ಭೇಟಿ:
ವಿಚಿತ್ರ ಅಂದ್ರೆ ಇತ್ತೀಚೆಗಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸ್ ನೇಮಕಾತಿ ಹಗರಣದಲ್ಲಿ ದಾಳಿಗೆ ಒಳಗಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾರಂಗಿ ಅವರ ಮನೆಗೆ ಭೇಟಿ ನೀಡಿದ್ದರು.
ಸೂಕ್ತ ತನಿಖೆ ಆದ್ರೆ ಇಬ್ಬರು ಸಚಿವರು ರಾಜೀನಾಮೆ:
ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ಸೂಕ್ತ ತನಿಖೆಯಾದ್ರೆ ಇಬ್ಬರು ಸಚಿವರು ರಾಜೀನಾಮೆ ನೀಡುವ ಪರಿಸ್ಥಿತಿ ಬರುತ್ತದೆ ಎಂದು ಚಿತ್ತಾಪುರ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಿಐಡಿ ತನಿಖಾ ವರದಿ ಬಳಿಕ ನೇಮಕಾತಿ ನಿರ್ಧಾರ – ಅನಿಶ್ಚಿತೆಯಲ್ಲಿ ಅಭ್ಯರ್ಥಿಗಳು
545 ಪಿಎಸ್ಐ ನೇಮಕಾತಿ ಬಗ್ಗೆ ಸಿಐಡಿ ವರದಿ ಬಳಿಕವಷ್ಟೇ ಕ್ರಮಕೈಗೊಳ್ಳುವುದಾಗಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ. ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಹೊಸದಾಗಿ ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸಿ 54 ಸಾವಿರ ಪಿಎಸ್ಐ ಅಭ್ಯರ್ಥಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಈಗ ಸಿಐಡಿ ವರದಿ ಬಂದ ಬಳಿಕವಷ್ಟೇ ನೇಮಕಾತಿ ಬಗ್ಗೆ ಮುಂದಿನ ನಿರ್ಧಾರ ಎಂದು ಹೇಳಿರುವುದು ಅಭ್ಯರ್ಥಿಗಳ ಭವಿಷ್ಯವನ್ನು ಅನಿಶ್ಚಿತತೆಯಲ್ಲಿ ದೂಡಿದೆ.