ದಕ್ಷಿಣ ಕನ್ನಡ ಜಿಲ್ಲೆಯ ಮಲ್ಪೆಯಲ್ಲಿ ಮೀನು ಶುಚಿಗೊಳಿಸುವ ಟ್ಯಾಂಕ್ಗೆ ಇಳಿದಿದ್ದ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ದುರಂತ ಸಂಭವಿಸಿದ್ದು, ನಿನ್ನೆ ಮೂವರು ಸಾವನ್ನಪ್ಪಿದ್ದರು, ಇಬ್ಬರು ಇವತ್ತು ಬೆಳಗ್ಗೆ ಪ್ರಾಣಬಿಟ್ಟಿದ್ದಾರೆ.
ದುರಂತ ಸಂಬAಧ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಮೃತ ಕಾರ್ಮಿಕರು ಪಶ್ಚಿಮ ಬಂಗಾಳ ಮೂಲದವರು.
ಮುಂಬೈ ಮೂಲದ ರಾಜು ಎನ್ನುವವರಿಗೆ ಸೇರಿ ಶ್ರೀ ಉಲ್ಕಾ ಕಂಪನಿಗೆ ಸೇರಿದ ಮೀನಿನ ಟ್ಯಾಂಕ್ ಇದಾಗಿದೆ. ದೊಡ್ಡ ಮೀನಿನ ಟ್ಯಾಂಕ್ಗೆ ಮೀನು ಶುಚಿಗೊಳಿಸಲು ಇಳಿದಿದ್ದ ಕಾರ್ಮಿಕರು ಶುಚಿಗೊಳಿಸಿದ ಮೀನನ್ನು ಹೊರಗೆ ತೆಗೆಯುವಾಗ ದುರಂತ ಸಂಭವಿಸಿದೆ.