ಐಪಿಎಲ್ ನ 15 ನೇ ಸೀಸನ್ ಮೇಲೆ ಕೊರೋನಾ ಕರಿನೆರಳು ಬಿದ್ದಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮತ್ತಿಬ್ಬರಿಗೆ ಕೊರೋನಾ ಪಾಸಿಟಿವ್ ಆಗಿದೆ.
ಕಳೆದ ವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಗೆ ಕೋವಿಡ್ ಪಾಸಿಟಿವ್ ಆಗಿತ್ತು. ಬಳಿಕ ಈಗ ಮತ್ತಿಬ್ಬರಿಗೆ ಕೊರೋನಾ ಪಾಸಿಟಿವ್ ಆಗಿದೆ. ಸೋಮವಾರ ನಡೆಸಿದ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ವೇಳೆ ಇಬ್ಬರಿಗೆ ಕೊರೋನಾ ಪಾಸಿಟಿವ್ ಆಗಿರುವುದು ಕಂಡು ಬಂದಿದೆ. ವಿದೇಶಿ ಆಟಗಾರ ತಲೆನೋವು ಮತ್ತು ಜ್ವರದಿಂದಲೂ ಸಹ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡದ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗೆ ಮತ್ತೊಂದು ಸುತ್ತಿನ RT PCR ಪರೀಕ್ಷೆ ಮಾಡಲು ಬಿಸಿಸಿಐ ಸೂಚಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ ನಲ್ಲಿ ಕೊರೋನಾ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಇಂದು ತಂಡದ ಪ್ರಯಾಣವನ್ನು ತಡೆ ಹಿಡಿಯಲಾಗಿದೆ. ಡೆಲ್ಲಿ ತಂಡ ಮುಂಬೈನಿಂದ ಪುಣೆಗೆ ತೆರಳಬೇಕಿತ್ತು. ಡೆಲ್ಲಿ ತಂಡ ಬುಧವಾರ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಪಂದ್ಯವನ್ನಾಡಬೇಕಿತ್ತು.
ಇನ್ನು ಕಳೆದ ಶುಕ್ರವಾರ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಗೆ ಕೋವಿಡ್ ಪಾಸಿಟಿವ್ ಆಗಿತ್ತು. ಆ ಬಳಿಕ ಡೆಲ್ಲಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಪಂದ್ಯವನ್ನಾಡಿತ್ತು. ಆದರೆ ಪಂದ್ಯದ ವೇಳೆ ಡೆಲ್ಲಿ ತಂಡದ ಆಟಗಾರರು ಆರ್ ಸಿ ಬಿ ಆಟಗಾರರಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಪಂದ್ಯದ ಬಳಿಕ ಪರಸ್ಪರರಿಗೆ ಧನ್ಯವಾದ ತಿಳಿಸಿರಲಿಲ್ಲ.