ಒಂದು ಕಡೆ ಬಾಕ್ಸ್ ಆಫೀಸ್ ನಲ್ಲಿ ಕನ್ನಡದ ಹೆಮ್ಮೆಯ ಸಿನೆಮಾ KGF2 ಧೂಳೆಬ್ಬಿಸುತ್ತಿದ್ದರೆ, ಮತ್ತೊಂದು ಕಡೆ IPL ನಲ್ಲಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಜೃಂಭಿಸುತ್ತಿದೆ.
ನಿನ್ನೆ ಲಖನೌ ವಿರುದ್ಧ ನಡೆದ ಪಂದ್ಯದಲ್ಲಿ RCB ಗೆದ್ದು ಬೀಗಿದೆ. ಈ ರೋಚಕ ಪಂದ್ಯವನ್ನು KGF 2 ಚಿತ್ರದ ಅಧಿರಾ ಪಾತ್ರಧಾರಿ ಸಂಜಯ್ ದತ್, ರಮೀಕಾ ಸೇನ್ ಪಾತ್ರಧಾರಿ ರವೀನಾ ಟನ್ಡನ್ ಸ್ಟೇಡಿಯಂನಲ್ಲಿ ವೀಕ್ಷಿಸಿ ಸಂಭ್ರಮಿಸಿದ್ದಾರೆ.
KGF ಚಿತ್ರತಂಡದ ಜೆರ್ಸಿಗಳನ್ನು ಬಾಲಿವುಡ್ ಸ್ಟಾರ್ ಗಳು ಧರಿಸಿ RCB ಬೆಂಬಲಿಸಿದ್ದಾರೆ.
ಈ ವೇಳೆ KGF ನಿರ್ಮಾಪಕ, ಹೊಂಬಾಳೆ ಫಿಲಂಸ್ ಮಾಲೀಕ ವಿಜಯ್ ಕಿರಗಂದೂರ್ ಸೇರಿ ಹಲವರು ಸಾಥ್ ನೀಡಿದ್ದರು.