2018ರ ಚುನಾವಣಾ ಅಕ್ರಮದ ಕುರಿತಂತೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ತಮಿಳುನಾಡು ನೋಂದಣಿಯ ಲಾರಿ ತುಂಬಾ ಮುನಿರತ್ನ ಚಿತ್ರವಿದ್ದ ಟೀಶರ್ಟ್ ಇದ್ದವು. ಅದನ್ನು ಎಲ್ಲಿ ಹೇಗೆ ಹಿಡಿದೆವು ಎಂದು ಬಿಜೆಪಿ ಪರಿಷತ್ ಸದಸ್ಯ ಮುನಿರಾಜು ಗೌಡ ವಿವರಣೆ ನೀಡುವಾಗ ಮಧ್ಯಪ್ರವೇಶ ಮಾಡಿದ ಹೈಕೋರ್ಟ್, ನಿಮ್ಮ ಸಾಕ್ಷ್ಯ ಮುನಿರತ್ನ ಕುರುಕ್ಷೇತ್ರದಂತೆ ಇರಬಾರದು.. ನೀವು ಹೇಳುವ ಘಟನಾವಳಿಗಳಿಗೆ ಸಂಬಂಧಿಸಿದ ಸೂಕ್ತ ಸಾಕ್ಷ್ಯಗಳನ್ನು ನ್ಯಾಯಪೀಠದ ಮುಂದೆ ಹಾಜರುಪಡಿಸಬೇಕು. ಇಲ್ಲವಾದಲ್ಲಿ ನಿಮ್ಮ ಹೇಳಿಕೆಗೆ ಕಿಮ್ಮತ್ತು ಸಿಗುವುದಿಲ್ಲ ಎಂದು ಸೂಕ್ಷ್ಮವಾಗಿ ಎಚ್ಚರಿಕೆ ನೀಡಿತು.
ಈ ಘಟನೆಗಳಿಗೆ ಸಂಬಂಧಿಸಿದ ಫೋಟೋ, ವಿಡಿಯೋ ಸಾಕ್ಷ್ಯಗಳನ್ನು ದಾಖಲಿಸಿಕೊಳ್ಳುವಾಗ, ಮುನಿರತ್ನ ಪರ ವಕೀಲರು ಮಧ್ಯಪ್ರವೇಶಿಸಿ, ಈ ಸಾಕ್ಷ್ಯಗಳನ್ನು IT ಕಾಯ್ದೆ 2000ರ ಕಲಂ 65ಬಿ ಅನ್ವಯ ಪರಿಶೀಲನೆಗೆ ಒಳಪಡಬೇಕು ಎಂದು ಕೋರಿದರು. ಇದಕ್ಕೆ ನ್ಯಾಯಾಲಯ ಕೂಡಾ ಸಮ್ಮತಿ ಸೂಚಿಸಿತು.