ಬಲವಂತವಾಗಿ ವೇಶ್ಯಾವಾಟಿಕೆಗೆ ಕಳೆದ 8 ತಿಂಗಳ ಹಿಂದೆ ತಳ್ಳಲಾಗಿದ್ದ 13 ವರ್ಷದ ಅಪ್ರಾಪ್ತೆ ಹುಡುಗಿಯನ್ನು ಗುಂಟೂರು ಪೊಲೀಸರು ಏ.19 ರಂದು ರಕ್ಷಣೆ ಮಾಡಿದ್ದಾರೆ. 8 ತಿಂಗಳ ಅವಧಿಯಲ್ಲಿ ಈ ಅಪ್ರಾಪ್ತೆಯ ಮೇಲೆ 80 ಜನರಿಂದ ಗ್ಯಾಂಗ್ ರೇಪ್ ನಡೆದಿದೆ.
ಬಿ.ಟೆಕ್ ವಿದ್ಯಾರ್ಥಿಯನ್ನು ಒಳಗೊಂಡಂತೆ 10 ಜನರನ್ನು ಏ.19 ರಂದೇ ಬಂಧಿಸಲಾಗಿದೆ. ಹಾಗೆಯೇ 80 ಜನರನ್ನು ಬಂಧಿಸಲಾಗಿದ್ದು, ಇನ್ನುಳಿದವರ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಹುಡುಗಿಯನ್ನು ಸ್ವರ್ಣಕುಮಾರಿ ಎನ್ನುವ ಯುವತಿ ದತ್ತು ತೆಗೆದುಕೊಂಡಿದ್ದಳು. ಈಕೆ ಸಂತ್ರಸ್ತೆಯ ತಾಯಿಗ ಗೆಳತಿಯಾಗಿದ್ದಾಳೆ. ಕಳೆದ ಜೂನ-2021 ರಲ್ಲಿ ಕೊರೋನಾ ಸಾಂಕ್ರಾಮಿಕದ ವೇಳೆ ಸಂತ್ರಸ್ತೆಯ ತಾಯಿ ಆಸ್ಪತ್ರೆಯಲ್ಲಿದ್ದರು. ಕೆಲವೇ ದಿನಗಳಲ್ಲಿ ಆಸ್ಪತ್ರೆಯಲ್ಲಿ ಕೊರೋನಾ ಸಾಂಕ್ರಾಮಿಕದಿಂದ ಅವರು ನಿಧನಹೊಂದಿದ್ದರು. ಅನಂತರ ಸಂತ್ರಸ್ತೆಯ ತಂದೆಗೆ ತಿಳಿಯದಂತೆಯೇ ಸ್ವರ್ಣಕುಮಾರಿಯವರು ಸಂತ್ರಸ್ತೆಯನ್ನು ಕರೆದುಕೊಂಡು ಹೋಗಿದ್ದರು.
ಪ್ರಕರಣ ದಾಖಲಿಸಿದ ತಂದೆ
ಅಗಸ್ಟ್ 2021 ರಲ್ಲಿ ಸಂತ್ರಸ್ತ ಹುಟುಗಿಯ ತಂದೆ ಗುಂಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಆಧಾರದ ಮೇಲೆ ಸ್ವರ್ಣಕುಮಾರಿಯವರು ಮೊದಲ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.
ಜನವರಿಯಲ್ಲಿ ಮೊದಲ ಬಾರಿಗೆ ಆರೋಪಿಯನ್ನು ಬಂಧಿಸಲಾಗಿದ್ದು, ಇದೀಗ ಏ.19 ರಂದು ಗುಂಟೂರು ವೆಸ್ಟ್ ಜೋನ್ ಪೊಲೀಸರು 1ಒ ಜನ ಪೊಲೀಸರನ್ನು ಬಂಧಿಸಿದ್ದಾರೆ.
ಸಂತ್ರಸ್ತೆ ಯುವತಿಯನ್ನು ಪ್ರಶ್ನಿಸಿದಾಗ ಈ ಭಯಾನಕ ಘಟನೆಯ ವಾಸ್ತವ ಸ್ಥಿತಿ ಪೊಲೀಸರ ಅರಿವಿಗೆ ಬಂದಿದೆ.
ಘಟನೆ ಬೆಳಕಿಗೆ ಬಂದಿರುವುದೇ ರೋಚಕ
13 ವರ್ಷದ ಅಪ್ರಾಪ್ತ ಯುವತಿಯನ್ನು ತೆಲಂಗಾಣ ಹಾಗೂ ಆಂಧ್ರಪ್ರದೇಶದ ಬೇರೆ ಬೇರೆ ವೇಶ್ಯಾವಾಟಿಕೆಯ ಗೃಹಗಳಿಗೆ ಕಳೆದ 8 ತಿಂಗಳುಗಳಿಂದ ಕಳುಹಿಸಲಾಗುತ್ತಿತ್ತು. ಇದರ ಆಧಾರದ ಮೇಲೆ ಸ್ವರ್ಣಕುಮಾರಿಯವರನ್ನು ಪೊಲೀಸರು ಮೊದಲ ಆರೋಪಿಯನ್ನಾಗಿಸಿದ್ದರು.
ಹೆಚ್ಚುವರಿ ಸೂಪರಿಟೆಂಡೆಂಟ್ ಪೊಲೀಸ್ ಕೆ ಸುಪ್ರಜಾ ಅವರು ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ಪಿನ್ಗಳು, 35 ಜನ ಪಿಂಪ್ಸ್ಗಳನ್ನು ಬಂಧಿಸಲಾಗಿದೆ. ಉಳಿದ ಗ್ರಾಹಕರನ್ನೂ ಬಂಧಿಲಾಗಿದೆ ಎಂದು ಹೇಳಿದ್ದಾರೆ.
ಈ ಪ್ರಕರಣದ ಒಬ್ಬ ಆರೋಪಿ ಲಂಡನ್ನಲ್ಲಿ ಇದ್ದಾರೆ. ಪೊಲೀಸರು ಒಂದು ಕಾರ್, 53 ಮೊಬೈಲ್ಸ್, 3 ಅಟೋ ಹಾಗೂ ಬೈಕ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ವಿಜಯವಾಡ, ಹೈದ್ರಾಬಾದ್, ಕಾಕಿನಾಡ ಹಾಗೂ ನೆಲ್ಲೂರುಗಳಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.