ರಥದ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿರುವ ದುರಂತ ತಮಿಳುನಾಡಿನಲ್ಲಿ ಘಟಿಸಿದೆ. ತಂಜಾವೂರು ಜಿಲ್ಲೆಯ ಕಲಿಮೇಡುವಿನಲ್ಲಿರುವ ಅಪಾರ್ ದೇವಸ್ಥಾನದ ರಥೋತ್ಸವ ವೇಳೆ ದುರಂತ ಸಂಭವಿಸಿದೆ.
ರಥ ತಿರುವು ತೆಗೆದುಕೊಳ್ಳುವಾಗ ವಿದ್ಯುತ್ ತಂತಿಗೆ ರಥ ಸ್ಪರ್ಶಿಸಿದ ಕಾರಣ ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿದೆ. ರಥದ ಎತ್ತರ ಹೈಟ್ರಾನ್ಸಿಷನ್ ವೈರ್ಗೆ ತಗುಲಲ್ಲ ಎಂಬ ಕಾರಣಕ್ಕೆ ಮತ್ತು ಹೈ ಟ್ರಾನ್ಸಿಷನ್ ವೈರ್ ಆಗಿದ್ದ ಕಾರಣ ಆ ತಂತಿಯಲ್ಲಿ ವಿದ್ಯುತ್ ಹರಿಯುವಿಕೆಯನ್ನು ಸ್ಥಗಿತಗೊಳಿಸಿರಲಿಲ್ಲ. ಆದರೆ ರಥದ ಎತ್ತರ ನಿರೀಕ್ಷೆಗಿಂತ ಹೆಚ್ಚಿದ ಕಾರಣ ದುರಂತ ಸಂಭವಿಸಿದೆ.
ವಿದ್ಯುತ್ ಸ್ಪರ್ಶಕ್ಕೆ ರಥ ಸಂಪೂರ್ಣ ಸುಟ್ಟು ಕರಕಲಾಗಿದೆ. ದುರಂತಕ್ಕೆ ಆಘಾತ ಸೂಚಿಸಿರುವ ಸಿಎಂ ಎಂಕೆ ಸ್ಟಾಲಿನ್ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ.