ಡಾಲಿ ಧನಂಜಯ್ ನಟನೆಯ ಹಾಗೂ ನಿರ್ಮಾಣದ ಹೆಡ್ಬುಷ್ ಚಿತ್ರದ ವಿರುದ್ಧ ಒಂದು ಕಾಲದ ಡಾನ್ ಜಯರಾಜ್ ಪುತ್ರ ಹೊಸ ಕ್ಯಾತೆ ತೆಗೆದಿದ್ದಾರೆ. ಈ ಚಿತ್ರದ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಜಯರಾಜ್ ಪುತ್ರ ಅಜಿತ್ ಜಯರಾಜ್ ದೂರು ನೀಡಿದ್ದಾರೆ.
‘ಹೆಡ್ಬುಷ್’ ಎಂ.ಪಿ.ಜಯರಾಜ್ ಜೀವನಾಧಾರಿತ ಚಿತ್ರವಾಗಿದ್ದು, ಅಗ್ನಿ ಶ್ರೀಧರ್ ಅವರ ಕಥೆ ಈ ಚಿತ್ರಕ್ಕಿದೆ.
ನಮ್ಮ ತಂದೆಯನ್ನು ಕೆಟ್ಟವರಂತೆ ಟ್ರೈಲರ್ನಲ್ಲಿ ಬಿಂಬಿಸಲಾಗಿದೆ. ಕುಟುಂಬದವರ ಅನುಮತಿಯಿಲ್ಲದೆ ತಂದೆಯವರ ಜೀವನಾಧಾರಿತ ಚಿತ್ರ ತೆಗೆಯಲು ಹೊರಟಿದ್ದಾರೆ. ಇದರಿಂದ ನಮ್ಮ ಕುಟುಂಬಸ್ಥರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅಜಿತ್ ಜಯರಾಜ್, ನಮ್ಮ ತಂದೆಯವರ ಕುರಿತು ಚಿತ್ರ ಮಾಡುತ್ತಿದ್ದಾರೆ ಎಂದು ತಿಳಿದ ಬಳಿಕ ಚಿತ್ರತಂಡವನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ, ಸಿನೆಮಾ ತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಕಾನೂನಿನ ಮೂಲಕವೇ ಹೊಗಲು ಬಯಸಿದ್ದೇನೆ ಎಂದು ಹೇಳಿದ್ದಾರೆ.
ಇನ್ನು, ಅಜಿತ್ ಜಯರಾಜ್ ಅವರ ದೂರಿಗೆ ಸಂಬಂಧಿಸಿದಂತೆ ಚಿತ್ರತಂಡ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.