PSI ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಸರ್ಕಾರದ ವಿರುದ್ಧ ಹಲವು ಆರೋಪ ಮಾಡಿದ್ದ ಕಾಂಗ್ರೆಸ್ ಮಾಜಿ ಮಂತ್ರಿ ಪ್ರಿಯಾಂಕ್ ಖರ್ಗೆ ಅವರಿಗೆ CID ಮೂರನೇ ಬಾರಿ ನೋಟೀಸ್ ನೀಡಿದೆ. ಗುರುವಾರ, ಶುಕ್ರವಾರದೊಳಗೆ ವಿಚಾರಣೆಗೆ ಬರುವಂತೆ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ, ತಮಗೆ ಮೂರನೇ ನೋಟೀಸ್ ಕೊಡಿಸಿದ ಆರಗ ಜ್ಞಾನೇಂದ್ರಗೆ ಧನ್ಯವಾದಗಳು. PSI ಹಗರಣದ ಬಗ್ಗೆ ತನಿಖೆಗೆ ಕೋರಿ ಸಚಿವ ಪ್ರಭು ಚವಾಣ್ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ನೀವು ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ನಾನು ಈ ನೋಟೀಸ್ ಗೆ ಉತ್ತರ ಕೊಡುತ್ತೇನೆ.
ಹಾಗೇ, ನೀವು ಹಗರಣಕ್ಕೆ ಸಂಬಂಧಿಸಿ ಸದನದಲ್ಲಿ ನೀಡಿದ ಕ್ಲೂ ಲೆಸ್ ಹೇಳಿಕೆಗಳಿಗೆ ಸ್ಪಷ್ಟನೆ ಕೊಡಬೇಕು ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.