ಎರಡು ಮಹಡಿಯ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಏಳು ಮಂದಿ ಸಜೀವ ದಹನಗೊಂಡಿರುವ ಘಟನೆ ಮಧ್ಯ ಪ್ರದೇಶ ರಾಜಧಾನಿ ಇಂದೋರ್ ನ ಸ್ವರ್ಣ ಭಾಗ್ ಕಾಲೊನಿಯಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಮನೆಯೊಂದರ ಒಳಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು ಹತ್ತಿ ಉರಿದಿರಬಹುದು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ ಎಂದು ಇಂದೋರ್ ಪೊಲೀಸ್ ಆಯುಕ್ತ ಹರಿನಾರಾಯಣ ಚಾರಿ ಮಿಶ್ರ ತಿಳಿಸಿದ್ದಾರೆ.
ಏಳು ಮಂದಿ ಸಜೀವ ದಹನಗೊಂಡರೆ ಅಗ್ನಿಶಾಮಕ ಸಿಬ್ಬಂದಿ 9 ಮಂದಿಯನ್ನು ಇದುವರೆಗೆ ರಕ್ಷಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರಬಹುದು. ಬೆಂಕಿಯನ್ನು ನಂದಿಸಿ ಸಹಜ ಸ್ಥಿತಿಗೆ ತರಲು ಮೂರು ಗಂಟೆ ಹಿಡಿಯಿತು ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ.
ಹೆಚ್ಚಿನ ತನಿಖೆ ಮುಂದುವರಿದಿದೆ.