ಆರ್ಥಿಕ ಸಂಕಷ್ಟಕ್ಕೆ ನಲುಗಿರುವ ಶ್ರೀಲಂಕಾದಲ್ಲಿ ಕೊನೆಗೂ ಪ್ರಧಾನಿ ಮಹೀಂದ್ರ ರಾಜಪಕ್ಷ ರಾಜೀನಾಮೆ ಸಲ್ಲಿಸಿದ್ದಾರೆ. ಸಹೋದರನೂ ಆಗಿರುವ ಗೊಟಬಯಾ ರಾಜಪಕ್ಷ ಅವರು ತಮ್ಮ ಸಹೋದರನಿಗೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು.
ಪ್ರಧಾನಿ ಸ್ಥಾನಕ್ಕೆ ಮಹೀಂದ್ರ ರಾಜಪಕ್ಷ ರಾಜೀನಾಮೆಯಿಂದ ಅಧ್ಯಕ್ಷರು ಹೊಸ ಸರ್ಕಾರವನ್ನು ರಚಿಸಲು ಹಾದಿ ಸುಗಮ ಆಗಲಿದೆ. ಸರ್ವಪಕ್ಷಗಳ ಜೊತೆಗೂಡಿ ಗೊಟಬಯಾ ರಾಜಪಕ್ಷ ಮಧ್ಯಂತರ ಸರ್ಕಾರವನ್ನು ರಚಿಸುವ ಸಾಧ್ಯತೆ ಇದ್ದು, ಈಗಾಗಲೇ ಸರ್ವ ಪಕ್ಷಗಳಿಗೂ ಆಹ್ವಾನ ನೀಡಿದ್ದಾರೆ.
ಈ ನಡುವೆ ತುರ್ತು ಪರಿಸ್ಥಿತಿ ಏರಿಕೆ ಆಗಿರುವ ಶ್ರೀಲಂಕಾದಲ್ಲಿ ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು, ಇಡೀ ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿದೆ.