ಪಂಜಾಬ್ ಪೊಲೀಸರ ಗುಪ್ತಚರ ದಳ ಮುಖ್ಯ ಕಚೇರಿಯ ಮೇಲೆ ಗ್ರೆನೇಡ್ವುಳ ರಾಕೆಟ್ ದಾಳಿ ನಡೆದಿದೆ. ಮೊಹಾಲಿಯಲ್ಲಿ ಗುಪ್ತಚರ ಕಚೇರಿ ಮುಖ್ಯ ಕಚೇರಿ ಮೇಲಾಗಿರುವ ದಾಳಿಯಿಂದ ಕಚೇರಿಗೆ ಭಾರೀ ಹಾನಿ ಆಗಿದೆ.
ದಾಳಿಯನ್ನು ಅಲ್ಪ ತೀವ್ರತೆಯ ಸ್ಫೋಟ ಎಂದು ಪೊಲೀಸರು ಹೇಳಿದ್ದಾರೆ. ನಿನ್ನೆ ಸಂಜೆ 7.45ರ ವೇಳೆಗೆ ದಾಳಿ ನಡೆದಿದೆ.
ಪಂಜಾಬ್ನಲ್ಲಿ ಪ್ರಚಂಡ ಬಹುಮತದೊಂದಿಗೆ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಭಗವಂತ್ ಮನ್ `ರಾಜ್ಯದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ಯತ್ನಿಸುವುದನ್ನು ಸಹಿಸಲ್ಲ’ ಎಂದು ಹೇಳಿದ್ದಾರೆ.