ಒಟಿಟಿ ಪ್ಲಾಟ್ಫಾರ್ಮ್ ರೇಸ್ನಲ್ಲಿ ಜೀ5 ಕೂಡ ಮುಂದಿದೆ. ಸ್ಟಾರ್ ಹೀರೋಗಳ ಬ್ಲಾಕ್ ಬಸ್ಟರ್ ಸಿನಿಮಾಗಳ ಜೊತೆಗೆ ಸದಾಭಿರುಚಿ ಸಿನಿಮಾಗಳನ್ನು ಪ್ರೇಕ್ಷಕರಿಗೆ ಉಣಬಡಿಸ್ತಿರುವ ಜೀ5 ಒಟಿಟಿ ಈಗ ವೀಕೆಂಡ್ ನಲ್ಲಿ ಪ್ರೇಕ್ಷಕರಿಗೆ ಭರ್ಜರಿ ಧಮಾಕ ನೀಡಿದೆ. ಭಾರತದ ಸೆನ್ಸೇಷನಲ್ ಸೃಷ್ಟಿಸಿದ್ದ ಕಾಶ್ಮೀರಿ ಫೈಲ್ಸ್, ಕನ್ನಡದ ಸೂಪರ್ ಹಿಟ್ ಸಿನಿಮಾಗಳಾದ ಮುಗಿಲ್ ಪೇಟೆ ಹಾಗೂ ತಲೆದಂಡ ಸಿನಿಮಾಗಳು ಇದೇ ಮೇ 13ಕ್ಕೆ ಜೀ5 ಒಟಿಟಿಗೆ ಲಗ್ಗೆ ಇಡ್ತಿವೆ.
ಕನ್ನಡದಲ್ಲಿ ಬರ್ತಿದೆ ‘ಕಾಶ್ಮೀರಿ ಫೈಲ್ಸ್’
ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕಾಶ್ಮೀರಿ ಫೈಲ್ಸ್ ಸಿನಿಮಾ ಮೇ 13ರಂದು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗ್ತಿದೆ. ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ವಲಸೆ ಆಧಾರಿಸಿ ತಯಾರಿಸಿದ್ದ ಈ ಸಿನಿಮಾದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ, ಮಿಥುನ್ ಚಕ್ರವರ್ತಿ ಸೇರಿದಂತೆ ಅನುಭವಿ ತಾರಾಬಳಗ ನಟಿಸಿದ್ದಾರೆ. ಹಿಂದಿಯಲ್ಲಿ ರಿಲೀಸ್ ಆಗಿದ್ದ ಕಾಶ್ಮೀರಿ ಫೈಲ್ಸ್ ಸಿನಿಮಾ ಈಗ ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗ್ತಿದೆ. ಅಂತೇಯೇ ಕನ್ನಡ, ತಮಿಳು,ತೆಲುಗು ಭಾಷೆಯಲ್ಲಿ ಒಟಿಟಿಗೆ ಎಂಟ್ರಿ ಕೊಡ್ತಿದೆ.
ತಲೆದಂಡ ಜೀ5ಗೆ ಲಗ್ಗೆ
ರಾಷ್ಟ್ರಪ್ರಶಸ್ತಿ ವಿಜೇತ ದಿವಂಗತ ಸಂಚಾರಿ ವಿಜಯ್ ನಟನೆಯ ಕೊನೆಯ ಸಿನಿಮಾ ತಲೆದಂಡ ಕೂಡ ಜೀ5 ಒಟಿಟಿಯಲ್ಲಿ ಈ ವೀಕೆಂಡ್ ನಲ್ಲಿ ರಿಲೀಸ್ ಆಗ್ತಿದೆ. ಏಪ್ರಿಲ್ 1ರಂದು ರಿಲೀಸ್ ಆಗಿದ್ದ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಒಬ್ಬ ಮುಗ್ಧ ವ್ಯಕ್ತಿಯ ಪರಿಸರ ಪ್ರೇಮ , ಹೋರಾಟದ ಕಥೆ ಹೊಂದಿದ್ದು ಪಕ್ಕಾ ಕಂಟೆಂಟ್ ಬೇಸಡ್ ಸಿನಿಮಾ ತಲೆದಂಡಗೆ ಪ್ರವೀಣ್ ಕೃಪಾಕರ್ ಆಕ್ಷನ್ ಕಟ್ ಹೇಳಿದ್ದು, ಹರಿಕಾವ್ಯ ಅವರ ಅದ್ಭುತ ಸಂಗೀತ ಸಂಯೋಜನೆ ಮಾಡಿದ್ದಾರೆ.
ಕ್ರೇಜಿಪುತ್ರನ ಮುಗಿಲ್ ಪೇಟೆ
ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಾಯಕನಾಗಿ ನಟಿಸಿದ್ದ ಆ್ಯಕ್ಷನ್ ಮತ್ತು ಕೌಟುಂಬಿಕ ಕಥಾ ವಸ್ತುವಿನ ಜೊತೆಗೆ ರೊಮ್ಯಾಂಟಿಕ್ ಎಂಟರ್ಟೇನ್ಮೆಂಟ್ ಸಿನಿಮಾ ಮುಗಿಲ್ ಪೇಟೆ ಮೇ 13ಕ್ಕೆ ಪ್ರತಿಷ್ಠಿತ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗ್ತಿದೆ. ಮನೋರಂಜನ್ ನಾಲ್ಕನೇ ಸಿನಿಮಾವಾಗಿರುವ ‘ಮುಗಿಲ್ ಪೇಟೆ’ ಚಿತ್ರದಲ್ಲಿ ಮನುಗೆ ಜೋಡಿಯಾಗಿ ಕಯಾದು ಲೋಹರ್ ನಾಯಕಿಯಾಗಿ ಅಭಿನಯಿಸಿದ್ದು, ಚಿತ್ರಕ್ಕೆ ಭರತ್ ಎಸ್. ನಾವುಂದ ಆಕ್ಷನ್ ಕಟ್ ಹೇಳಿದ್ದು, ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.
ಜೀ5 ಒಟಿಟಿ ಸಂಸ್ಥೆ ಕೇವಲ ಸಿನಿಮಾಗಳು ಮಾತ್ರವಲ್ಲದೇ ವೆಬ್ ಸೀರೀಸ್ ಗಳನ್ನು ಪ್ರೇಕ್ಷಕರ ಮುಂದೆ ಇಡ್ತಿದೆ. ಅದ್ರಲ್ಲೂ ಈ ವಾರದ ವೀಕೆಂಡ್ ನಲ್ಲಿ ಚಿತ್ರರಸಿಕರಿಗೆ ಭರ್ಜರಿ ಬಾಡೂಟವನ್ನೇ ಜೀ5 ಬಡಿಸ್ತಿದೆ. ಕಾಶ್ಮೀರ್ ಫೈಲ್ಸ್ ತಲೆದಂಡ ಸಿನಿಮಾದ ಜೊತೆ ಮುಗಿಲ್ ಪೇಟೆ ಸಿನಿಮಾ ಮೇ 13ಕ್ಕೆ ಜೀ5 ಒಟಿಟಿಗೆ ಲಗ್ಗೆ ಇಡ್ತಿವೆ. ನೀವು ಮಿಸ್ ಮಾಡ್ದೇ ಜೀ5 ಆಪ್ ಡೌನ್ ಲೋಡ್ ಮಾಡಿಕೊಳ್ಳಿ ಮನೆಮಂದಿ ಜೊತೆ ಸಿನಿಮಾ ನೋಡಿ.