ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಸಮುದ್ರ ಬಂದರಿನಲ್ಲಿ ಮಂಗಳವಾರ ‘ಅಸಾನಿ’ ಚಂಡಮಾರುತದ ಪ್ರಭಾವದಿಂದ ನಿಗೂಢ ಚಿನ್ನದ ಬಣ್ಣದ ರಥವೊಂದು ದಡ ಸೇರಿದೆ.
ಸಮುದ್ರದ ದಡದಲ್ಲಿದ್ದ ಜನರು ಅಮುದ್ರದ ಅಲೆಯಲ್ಲಿ ರಥ ತೇಲಿಕೊಂಡು ಬರವುದನ್ನು ನೋಡಿ, ಆ ರಥವನ್ನು ದಡಕ್ಕೆ ತಂದಿದ್ದಾರೆ.
ಶ್ರೀಕಾಕುಲಂ ಜಿಲ್ಲೆಯ ನೌಪಾಡದ ಸಬ್ ಇನ್ಸ್ಸ್ಪೆಕ್ಟರ್ ಈ ಬಗ್ಗೆ ಮಾತನಾಡಿದ್ದು, ಗುಪ್ತಚರ ಇಲಾಖೆ ನಮಗೆ ಈ ಘಟನೆಯ ಮಾಹಿತಿ ನೀಡಿತ್ತು. ಈ ರಥ ಬೇರೆ ದೇಶದಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಗುಪ್ತಚರ ಇಲಾಖೆ ಹಾಗೂ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಅಸಾನಿ ಚಂಡಮಾರುತ ಆಂಧ್ರದ ಪ್ರದೇಶ ಹಾಗೂ ತಮಿಳುನಾಡಿನ ಬಂದರುಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಈಗಾಗಲೇ ಆಂಧ್ರದ ವಿಶಾಖಪಟ್ಟಣಂ ಮತ್ತು ತಮಿಳುನಾಡಿನ ಚೆನ್ನೈ ನ ವಿಮಾನ ನಿಲ್ದಾಣದಿಂದ ಎಲ್ಲಾ ಇಂಡಿಗೋ ವಿಮಾನಯಾನವನ್ನು ರದ್ದುಗೊಳಿಸಲಾಗಿದೆ.