ಶಿಕ್ಷಕರು ಕ್ಷೇತ್ರದಿಂದ ಪರಿಷತ್ನ ಎರಡು ಸ್ಥಾನಗಳು ಮತ್ತು ಪದವೀಧರರ ಕ್ಷೇತ್ರದಿಂದ ಪರಿಷತ್ನ ಎರಡು ಸ್ಥಾನಗಳಿಗೆ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ.
ಅಧಿಸೂಚನೆ ಮೇ 19ರಂದು ಪ್ರಕಟ ಆಗಲಿದ್ದು, ಮೇ 26ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ. ಜೂನ್ 13ರಂದು ಮತದಾನ ನಡೆಯಲಿದ್ದು, ಜೂನ್15ರಂದು ಮತ ಎಣಿಕೆ ನಡೆಯಲಿದೆ.
ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಆಗಿರುವ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಅರುಣ್ ಶಹಾಪುರ, ಪದವೀಧರ ಕ್ಷೇತ್ರದಿಂದ ಆಯ್ಕೆ ಆಗಿರುವ ಹನುಮಂತ ನಿರಾಣಿ ಮತ್ತು ಕೆ ಟಿ ಶ್ರೀಕಂಠೇಗೌಡ ಅವರ ಅವಧಿ ಜುಲೈ 4ರಂದು ಕೊನೆಗೊಳ್ಳಲಿದೆ.
ಈಗಾಗಲೇ ಹೊರಟ್ಟಿಯವರು ಬಿಜೆಪಿಗೆ ಸೇರ್ಪಡೆ ಆಗಿದ್ದು, ಅವರಿಗೆ ಮತ್ತೆ ಪಕ್ಷ ಟಿಕೆಟ್ ನೀಡುವ ನಿರೀಕ್ಷೆ ಇದೆ.