ಮಹತ್ವದ ಬೆಳವಣಿಗೆಯೊಂದರಲ್ಲಿ `ಜಿಎಸ್ಟಿ ಸಮಿತಿಯ ಶಿಫಾರಸ್ಸುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧರಾಗೇ ಇರಬೇಕೆಂದಿಲ್ಲ, ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಸಂಬAಧ ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳು (ವಿಧಾನಸಭೆ) ಪ್ರತ್ಯೇಕ ನಿಯಮಗಳನ್ನು ರೂಪಿಸಬಹುದು’ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಜಿಎಸ್ಟಿ ಸಮಿತಿಯ ಶಿಫಾರಸ್ಸುಗಳು ಪ್ರೇರಣಾ ಸ್ವರೂಪದ್ದಾಗಿರಬೇಕು ಎಂದು ಸಂಸತ್ತು ಬಯಸಿತ್ತು ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿದ್ದ ಪೀಠ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
`ಜಿಎಸ್ಟಿ ಸಮಿತಿ ಶಿಫಾರಸ್ಸುಗಳನ್ನು ಸಮಗ್ರ ಚರ್ಚೆಯ ಉತ್ಪನ್ನವಾಗಿದೆ. ಭಾರತದ ಒಕ್ಕೂಟ ವ್ಯವಸ್ಥೆ ರಾಜ್ಯ ಮತ್ತು ಕೇಂದ್ರದ ನಡುವೆ ಸಂವಾದ’ ಎಂದು ಅಭಿಪ್ರಾಯಪಟ್ಟಿರುವ ಪೀಠ, `ಸಹಭಾಗಿ ಒಕ್ಕೂಟ ವ್ಯವಸ್ಥೆ’ಗೆ ತನ್ನ ತೀರ್ಪಿನಲ್ಲಿ ಒತ್ತು ನೀಡಿದೆ.