ದೇಶಾದ್ಯಂತ ಸಾಕಷ್ಟು ಸುದ್ದಿ ಆಗಿದ್ದ ಹೈದ್ರಾಬಾದ್ನಲ್ಲಿ ನಡೆದಿದ್ದ ಯುವತಿ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್ಕೌಂಟರ್ ನಕಲಿ ಎಂದು ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿ ವರದಿ ನೀಡಿದೆ.
ಅಲ್ಲದೇ ನಕಲಿ ಎನ್ಕೌಂಟರ್ ನಡೆಸಿದ್ದ 10 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಶಿಫಾರಸ್ಸು ಮಾಡಿದೆ.
ನಕಲಿ ಎನ್ಕೌಂಟರ್ನಲ್ಲಿ ಹತರಾದ ನಾಲ್ವರು ಆರೋಪಿಗಳಲ್ಲಿ ಮೂವರು ಅಪ್ತಾಪ್ತರು ಮತ್ತು ಓರ್ವ ಮಾತ್ರ ವಯಸ್ಕ ಎಂದು ಸಮಿತಿ ವರದಿಯಲ್ಲಿ ಹೇಳಿದೆ. ಪೊಲೀಸರು ಓರ್ವ ಮಾತ್ರ ಅಪ್ರಾಪ್ತ ಎಂದು ಹೇಳಿಕೊಂಡಿದ್ದರು.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಾಗಿದ್ದವರು ಸ್ಥಳ ಮಹಜರು ಉದ್ದೇಶಕ್ಕಾಗಿ ಕರೆದುಕೊಂಡು ಹೋಗುವ ವೇಳೆ ಪಿಸ್ತೂಲ್ ಕಸಿದುಕೊಂಡು ದಾಳಿಗೆ ಯತ್ನಿಸಿದ್ದರು ಎಂಬ ಪೊಲೀಸರ ವಾದವನ್ನು ಸಮರ್ಥಿಸಿಕೊಳ್ಳಲು ಸೂಕ್ತ ಸಾಕ್ಷö್ಯಗಳಿಲ್ಲ ಎಂದು ಸಮಿತಿ ಹೇಳಿದೆ.
ನಕಲಿ ಎನ್ಕೌಂಟರ್ ಸಂಬAಧ 10 ಮಂದಿ ಪೊಲೀಸ್ ಅಧಿಕಾರಿಗಳಾಗಿರುವ ವಿ ಸುರೇಂದರ್, ಕೆ ನರಸಿಂಹ ರೆಡ್ಡಿ, ಶೇಖ್ ಲಾಲ್ ಮಧರ್, ಮೊಹಮ್ಮದ್ ಸಿರಾಜುದ್ದೀನ್, ಕೊಚರೆಲಾ ರವಿ, ಕೆ ವೆಂಕಟೇಶ್ವರಲು, ಎಸ್ ಅರವಿಂದ್ ಗೌಡ್, ಡಿ ಜಾನಕಿರಾಮ್, ಆರ್ ಬಾಲು ರಾಥೋಡ್ ಮತ್ತು ಡಿ ಶ್ರೀಕಾಂತ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆಯೂ ಸಲಹೆ ನೀಡಿದೆ.
2019ರಲ್ಲಿ ಹೈದ್ರಾಬಾದ್ ನಲ್ಲಿ ಪಶು ವೈದ್ಯೆಯೊಬ್ಬರನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬAಧ ಡಿಸೆಂಬರ್ 6ರಂದು ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ಮಾಡಲಾಗಿತ್ತು.
ಪೊಲೀಸರ ಎನ್ಕೌಂಟರ್ ಸಂಬAಧ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಸುಪ್ರಿಂಕೋರ್ಟ್ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿ ಎಸ್ ಸರ್ಪುಕರ್, ಬಾಂಬೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರೇಖಾ ಬಲ್ಡೋಡಾ ಮತ್ತು ಸಿಬಿಐ ಮಾಜಿ ನಿರ್ದೇಶಕ ಕಾರ್ತಿಕೇಯನ್ ಅವರ ತನಿಖಾ ಸಮಿತಿ ರಚಿಸಿತ್ತು.
ಸಮಿತಿಯ ವರದಿಯನ್ನು ಬಹಿರಂಗಪಡಿಸದAತೆ ಕೋರಿದ್ದ ತೆಲಂಗಾಣ ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಪೀಠ ತಿರಸ್ಕರಿಸಿದೆ. ತನಿಖೆಗೆ ಪ್ರಕರಣವನ್ನು ಮತ್ತೆ ತೆಲಂಗಾಣ ಹೈಕೋರ್ಟ್ಗೆ ವರ್ಗಾಯಿಸಿದೆ.