ಅಸ್ಪೃಶ್ಯತೆ ಆಚರಣೆಯಿಂದ ಹೊರಬಂದ ಗ್ರಾ.ಪಂಚಾಯತ್ಗೆ 25-50 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಯಾವುದೇ ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿ ಅಸ್ಪೃಶ್ಯತೆಗೆ ಸಂಪೂರ್ಣ ತಿಲಾಂಜಲಿ ನೀಡಿದರೆ ಅಂತಹ ಪಂಚಾಯತ್ಗೆ 25 ರಿಂದ 50 ಲಕ್ಷ ನಗದು ಪುರಸ್ಕಾರ ನೀಡುತ್ತೇವೆ. ಅಸ್ಪ್ರಶ್ಯತೆ ನಿವಾರಿಸುವುದು ನಮ್ಮ ಮೊದಲ ಹೆಜ್ಜೆ ಎಂದು ಹೇಳಿದ್ದಾರೆ.
ಯಾವುದೇ ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿ ಅಸ್ಪೃಶ್ಯತೆಗೆ ಸಂಪೂರ್ಣ ತಿಲಾಂಜಲಿ ನೀಡಿದರೆ ಅಂತಹ ಪಂಚಾಯತ್ಗೆ 25 ರಿಂದ 50 ಲಕ್ಷ ನಗದು ಪುರಸ್ಕಾರ ನೀಡುತ್ತೇವೆ. ಅಸ್ಪ್ರಶ್ಯತೆ ನಿವಾರಿಸುವುದು ನಮ್ಮ ಮೊದಲ ಹೆಜ್ಜೆ.#ವಿನಯಸಾಮರಸ್ಯ_ಯೋಜನೆ
— Kota Shrinivas Poojari (ಮೋದಿಜೀ ಪರಿವಾರ) (@KotasBJP) May 21, 2022
ಈ ಕುರಿತು ಇನ್ನು ಅಧಿಕೃತವಾಗಿ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ.