ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2 ಕಡೆ ಏಕಕಾಲಕ್ಕೆ ಭೂಕಂಪನ ನಡೆದಿದೆ.
ಚಿಕ್ಕಬಳ್ಳಾಪುರದಲ್ಲಿ 2.6 ತೀವ್ರತೆ ಹಾಗೂ ಚಿಂತಾಮಣಿಯಲ್ಲಿ 2.4 ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ 10 ಕಿ.ಮೀ ದೂರ ಹಾಗೂ ಭೂಮಿಯ 6.8 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಸೃಷ್ಠಿಯಾಗಿದೆ. ಮತ್ತೊಂದು, ಚಿಂತಾಮಣಿ ತಾಲೂಕು ಕೇಂದ್ರದಿಂದ 13 ಕಿ.ಮೀ ದೂರ ಹಾಗೂ 10 ಕಿ.ಮೀ ಭೂಮಿಯ ಆಳದಲ್ಲಿ ಕೇಂದ್ರಬಿಂದು ಸೃಷ್ಠಿಯಾಗಿದೆ ಎಂದು ವರದಿಯಾಗಿದೆ.
ಮಧ್ಯಾಹ್ನ 2 ಗಂಟೆ 18 ನಿಮಿಷ 19 ನಿಮಿಷದಲ್ಲಿ ಕ್ರಮವಾಗಿ ಈ ಎರಡೂ ಭೂಕಂಪನಗಳು ಸಂಭವಿಸಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಹಲವು ಬಾರಿ ಭೂಕಂಪನಗಳು ನಡೆದ ಬಗ್ಗೆ ವರದಿಯಾಗುತ್ತಿವೆ.