ಕಳೆದ ವರ್ಷ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಅವರು ರಾಮರಾಜ್ಯ ಭಾರತದಲ್ಲಿರುವ ಪೆಟ್ರೋಲ್, ಡೀಸೆಲ್ ಬೆಲೆಯನ್ನು ರಾವಣ ನಾಡು ಶ್ರೀಲಂಕಾದೊಂದಿಗೆ ಹೋಲಿಸಿದ್ದು ಚರ್ಚೆಗೆ ಮೂಲವಾಗಿತ್ತು.
ಈಗ ಶ್ರೀಲಂಕಾ ದಿವಾಳಿ ಎದ್ದಿದೆ. ಆದರೆ ದಿವಾಳಿ ಎದ್ದಿರುವ ಶ್ರೀಲಂಕಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಭಾರತಕ್ಕಿಂತಲೂ ಕಡಿಮೆ.
ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ 338 ರೂಪಾಯಿ (ಅಂದರೆ ಭಾರತದ ಕರೆನ್ಸಿ ಲೆಕ್ಕಾಚಾರದಲ್ಲಿ 72.83 ರೂ.)ಯಿಂದ 420 ರೂ. (ಅಂದರೆ ಭಾರತದ ಕರೆನ್ಸಿ ಲೆಕ್ಕಾಚಾರದಲ್ಲಿ 90.50 ರೂ.)ಗೆ ಏರಿಕೆ ಆಗಿದೆ.
ಶನಿವಾರ ಪ್ರಧಾನಿ ಮೋದಿ ಸರ್ಕಾರ ಪೆಟ್ರೋಲ್ ಮೇಲೆ ಲೀಟರ್ ಗೆ 9.55 ರೂ ಅಬಕಾರಿ ಸುಂಕ ಕಡಿತ ಮಾಡಿದ ಬಳಿಕವೂ ಬೆಂಗಳೂರಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 101 ರೂಪಾಯಿ ಇದೆ.
ಶ್ರೀಲಂಕಾದಲ್ಲಿ ಡೀಸೆಲ್ ಬೆಲೆ 289 ರೂಪಾಯಿ (ಅಂದರೆ ಭಾರತದ ಕರೆನ್ಸಿ ಲೆಕ್ಕಾಚಾರದಲ್ಲಿ 62.27 ರೂ.)ನಿಂದ 400 ರೂ. (ಅಂದರೆ ಭಾರತದ ಕರೆನ್ಸಿ ಲೆಕ್ಕಾಚಾರದಲ್ಲಿ 86.19 ರೂ.)ಗೆ ಏರಿಕೆ ಆಗಿದೆ.
1948ರಲ್ಲಿ ಶ್ರೀಲಂಕಾ ಸ್ವತಂತ್ರಗೊಂಡ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಲಾಗಿದೆ.