ಪುರುಷರ ಸಂಬಳ ಕೇಳಬಾರದು, ಹೆಂಗಸರ ವಯಸ್ಸು ಕೇಳಬಾರದು ಎನ್ನುವುದು ಜನಜನಿತ ಮಾತು. ಆದರೂ ಎಷ್ಟು ಸಂಬಳ ಕೊಡುತ್ತಾರೆ ಎಂದು ನಮ್ಮವರು ಸಿಕ್ಕಿದಾಗ ಕೇಳುವುದು ವಾಡಿಕೆ.
ಈಗ ನಾವು ಹೇಳುತ್ತಿರುವುದು ಕಾರ್ಪೋರೇಟ್ ಕಂಪನಿಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ಸಂಬಳ. ಇವರ ಮಾಸಿಕ ಮತ್ತು ವಾರ್ಷಿಕ ವೇತನ ಕೇಳಿದರೆ ಇಷ್ಟೊಂದು ಸಂಬಳ ತಗೋತ್ತಾರಾ ಎಂದು ಅಚ್ಚರಿ ಆಗುತ್ತೆ. ಇವರಲ್ಲಿ ಕೆಲವರು ಸ್ವತಃ ಕಂಪನಿಗಳ ಮಾಲೀಕರಾಗಿದ್ದಾರೆ.
ಸಲಿಲ್ ಪರೇಖ್:
ಇವರು ದೇಶದ ಪ್ರಮುಖ ಮಾಹಿತಿ ಮತ್ತು ತಂತ್ರಜ್ಞಾನ ಕಂಪನಿ ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ. ಇವರ ಸಂಬಳ ಎಷ್ಟು ಗೊತ್ತಾ..? ವರ್ಷಕ್ಕೆ ಬರೋಬ್ಬರೀ 71 ಕೋಟಿ ರೂಪಾಯಿ. ಇವರ ಸಂಬಳ ಶೇಕಡಾ 48ರಷ್ಟು ಹೆಚ್ಚಳ ಆಗಿದೆ ಎಂದು ಕಂಪನಿ ಘೋಷಿಸಿಕೊಂಡಿದೆ. 30 ವರ್ಷದಿಂದ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿರುವ ಇವರು ಇನ್ಫೋಸಿಸ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಹಿಂದೆ ಇವರು 49 ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದರು.
ಸಿ ಪಿ ಗುರ್ನಾನಿ:
ಇವತ್ತು ದೇಶದ ಮತ್ತೊಂದು ಮಾಹಿತಿ ತಂತ್ರಜ್ಞಾನ ಕಂಪನಿ ಟೆಕ್ ಮಹೀಂದ್ರ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರು. ಇವರು ವರ್ಷಕ್ಕೆ ಪಡೆಯುತ್ತಿದ್ದ ಸಂಬಳ 28 ಕೋಟಿ 57 ಲಕ್ಷ ರೂಪಾಯಿ.
ಎಸ್ ಎನ್ ಸುಬ್ರಹ್ಮಣಿಯನ್:
ಇವರು ಲಾರ್ಸನ್ ಅಂಡ್ ಟರ್ಬೋ ಇದರ ಸಿಇಒ ಮತ್ತು ಎಂಡಿ. ಇವರು ವರ್ಷಕ್ಕೆ ಪಡೆಯುವ ಸಂಬಳ 27 ಕೋಟಿ 17 ಲಕ್ಷ ರೂಪಾಯಿ (ಅದೂ ಕೋವಿಡ್ ಕಾರಣದಿಂದ ತಮ್ಮ ಸಂಬಳವನ್ನು ಕಡಿತಗೊಳಿಸಿದ ಬಳಿಕವೂ 27 ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದರು).
ಮುಖೇಶ್ ಅಂಬಾನಿ:
ಜಗತ್ತಿನ ಅತೀ ದೊಡ್ಡ ಶ್ರೀಮಂತರ ಪೈಕಿ ರಿಲಯನ್ಸ್ ಇಂಡಸ್ಟಿçÃಸ್ ಮಾಲೀಕ ಮುಖೇಶ್ ಅಂಬಾನಿ ಕೂಡಾ ಒಬ್ಬರು. ರಿಲಯನ್ಸ್ ಇಂಡಸ್ಟಿçÃಸ್ನಲ್ಲಿ ಇವರ ಪಾಲು ಶೇಕಡಾ 44. ಅಂದಹಾಗೆ ಇವರ ವರ್ಷದ ಸಂಬಳ 15 ಕೋಟಿ ರೂಪಾಯಿ. ಅಂದರೆ ತಿಂಗಳಲ್ಲಿ 1.25 ಕೋಟಿ ರೂಪಾಯಿ.
ರಾಜೇಶ್ ಗೋಪಿನಾಥನ್:
ದೇಶದ ಪ್ರಮುಖ ಐಟಿ ಕಂಪನಿ ಟಾಟಾ ಕನ್ಸಲೆಟೆನ್ಸಿ ಸರ್ವಿಸ್ (ಟಿಸಿಎಸ್) ಇದರ ಸಿಇಒ. ಇವರ ಸಂಬಳ 25.7 ಕೋಟಿ ರೂಪಾಯಿ.
ಪವನ್ ಮುಂಜಲ್:
ಇವರು ಹೀರೋ ಮೋಟೋಕಾರ್ಪ್ನ ಎಂಡಿ ಮತ್ತು ಸಿಇಒ. ಇವರ ವರ್ಷದ ಸಂಬಳದ 84.59 ಕೋಟಿ ರೂಪಾಯಿ. ತಿಂಗಳಿಗೆ 7 ಕೋಟಿ ರೂಪಾಯಿಗೂ ಅಧಿಕ ಸಂಬಳ.
ರಾಜೀವ್ ಬಜಾಜ್:
ಇವರು ಬಜಾಜ್ ಆಟೋ ಇದರ ಎಂಡಿ ಮತ್ತು ಸಿಇಒ. ಇವರ ವಾರ್ಷಿಕ ಸಂಬಳ 39 ಕೋಟಿ 86 ಲಕ್ಷ ರೂಪಾಯಿ. 2005ರಿಂದ ಇವರು ಬಜಾಜ್ ಕಂಪನಿಯ ಎಂಡಿ ಆಗಿದ್ದಾರೆ.
ಸುನಿಲ್ ಮಿತ್ತಲ್:
ಇವರು ಏರ್ಟೆಲ್ ಕಂಪನಿಯ ಮಾಲೀಕರು. ಇವರ ವಾರ್ಷಿಕ ಸಂಬಳ 30 ಕೋಟಿ ರೂಪಾಯಿ.
ಸಿದ್ಧಾರ್ಥ್ ಲಾಲ್:
ಇವರು ಪ್ರಮುಖ ಮೋಟಾರ್ಸ್ ಕಂಪನಿ ಏಚರ್ ಮೋಟಾರ್ಸ್ ಲಿಮಿಟೆಡ್ ಇದರ ಮಾಲೀಕರು. ಇವರು ಪಡೆಯುವ ವಾರ್ಷಿಕ ವೇತನ 19 ಕೋಟಿ 21 ಲಕ್ಷ ರೂ. 2019ರ ಹಣಕಾಸು ವರ್ಷದಲ್ಲಿ ಇವರ ಸಂಬಳ 12 ಕೋಟಿ 81 ಲಕ್ಷ ರೂಪಾಯಿ.
ಸಂಜೀವ್ ಪುರಿ:
ಇವರು ಪ್ರಮುಖ ಕಂಪನಿ ಐಟಿಸಿ ಇದರ ಮುಖ್ಯಸ್ಥರು ಮತ್ತು ವ್ಯವಸ್ಥಾಪಕ ನಿರ್ದೇಶಕರು. ಇವರು ಪಡೆಯುವ ವಾರ್ಷಿಕ ವೇತನ 10 ಕೋಟಿ 10 ಲಕ್ಷ ರೂಪಾಯಿ.
ಎನ್ ಚಂದ್ರಶೇಖರನ್:
ಇವರು ಟಾಟಾ ಸನ್ಸ್ ಇದರ ಮಾಲೀಕರು. 2020ರಲ್ಲಿ ಇವರ ಸಂಬಳ 58 ಕೋಟಿ ರೂಪಾಯಿ ಇತ್ತು. 2019ರಲ್ಲಿ ಇವರ ವಾರ್ಷಿಕ ವೇತನ 66 ಕೋಟಿ ರೂಪಾಯಿ ಇತ್ತು.