ಬಾಲಿವುಡ್ ಬಾದ್ಶಾ ಶಾರೂಖ್ ಖಾನ್ ಮನೆ `ಮನ್ನತ್’ನಲ್ಲಿ ಎಷ್ಟು ಟಿವಿಗಳಿವೆ..? ನಟರು ಯಾವ ಟಿವಿ ನೋಡ್ತಾರೆ, ಯಾವ ಬೈಕ್, ಕಾರು ಓಡಿಸ್ತಾರೆ, ಅವರ ಮನೆ ಹೇಗಿದೆ ಎನ್ನುವುದು ಸದಾ ಅವರ ಅಭಿಮಾನಿಗಳನ್ನು ಕಾಡುವ ಕುತೂಹಲ. ಈ ಕುತೂಹಲಕ್ಕೆ ಈಗ ಸ್ವತಃ ಶಾರುಖ್ ಖಾನ್ ಅವರೇ ಉತ್ತರ ಕೊಟ್ಟಿದ್ದಾರೆ.
ಎಲೆಕ್ಟ್ರಾನಿಕ್ ಉತ್ಪನ್ನಗಳ ದೈತ್ಯ ಕಂಪನಿ LG ಟಿವಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತಾಡಿದ ಶಾರುಖ್ ಖಾನ್ `ತಾವು ಈ ಬ್ರಾಂಡ್ ನ ರಾಯಭಾರಿ ಆಗುವುದಕ್ಕೂ ಮೊದಲೇ LG ಟಿವಿಯನ್ನು ಬಳಸುತ್ತಿದ್ದೆ’ ಎಂದು ಹೇಳಿದ್ದಾರೆ.
`ನನ್ನ ಬೆಡ್ ರೂಂನಲ್ಲಿ ಒಂದು ಟಿವಿ ಇದೆ. ನನ್ನ ಲಿವಿಂಗ್ ರೂಂನಲ್ಲಿ ಒಂದು ಟಿವಿ ಇದೆ. ನನ್ನ ಕಿರಿ ಮಗ ಅಬ್ರಾಹಂ ರೂಂನಲ್ಲಿ ಒಂದು ಟಿವಿ ಇದೆ. ಆರ್ಯನ್ ರೂಂನಲ್ಲಿ ಒಂದು ಟಿವಿ ಇದೆ. ಇತ್ತೀಚೆಗೆ ನನ್ನ ಜಿಮ್ನಲ್ಲಿದ್ದ ಟಿವಿ ಹಾಳಾಯಿತು, ಅದು ಸಂಪೂರ್ಣ ಹಾಳಾಗಲಿ ಎಂದು ಕಾದು ಆ ಬಳಿಕ ಒಂದು ಎಲ್ ಜಿ ಟಿವಿ ಖರೀದಿಸಿದೆ. ಟಿವಿಯೊಂದರ ಬೆಲೆ ಒಂದು ಲಕ್ಷ ಅಥವಾ ಒಂದೂವರೆ ಲಕ್ಷ ರೂಪಾಯಿ. ಆ ಲೆಕ್ಕಾಚಾರದಲ್ಲಿ ನಾನು ಟಿವಿಗೆ 30ರಿಂದ 40 ರೂಪಾಯಿ ಖರ್ಚು ಮಾಡಿದ್ದೇನೆ’ ಎಂದು ಶಾರೂಖ್ ಖಾನ್ ಹೇಳಿದ್ದಾರೆ.