ಕೊಲ್ಕತ್ತಾದಲ್ಲಿ ಮಾಡೆಲ್ ಯುವತಿಯರ ಸರಣಿ ಸಾವುಗಳು ನಡೆಯುತ್ತಿವೆ. ಇನ್ನು ನಿನ್ನೆ ಗುರುವಾರವಷ್ಟೇ ಮಾಡೆಲ್ ಬಿಡಿಶಾ ಮಜುಂದಾರ್ ಅವರು ತಮ್ಮ ಪ್ಲ್ಯಾಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಬೆನ್ನಲ್ಲೇ, ಮತ್ತೊಬ್ಬ ಮಾಡೆಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಸೀಲಿಂಗ್ ಗೆ ನೇಣು ಬಿಗಿದುಕೊಂಡು ಮಂಜುಷಾ ನಿಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಅವರ ಮಂಜುಷಾ ಕೊಠಡಿಯಲ್ಲಿ ಸಿಕ್ಕಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸಾವಿಗೆ ಇವರ ಆಪ್ತ ಸ್ನೇಹಿತೆ ಬಿದಿಶಾ ಡಿ ಮಂಜುನಾಥ್ ಅವರ ಸಾವೇ ಕಾರಣ ಎಂದಿದ್ದಾರೆ ಮಂಜುಷಾ ಪೋಷಕರು ಹೇಳಿದ್ದಾರೆ. ಬಿದಿಶಾ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ, ಮಂಜುಷಾ ಖಿನ್ನತೆಗೆ ಒಳಗಾಗಿದ್ದರಂತೆ. ಈ ಖಿನ್ನತೆಯೇ ಸಾವಿಗೆ ಕಾರಣವಾಗಿದೆ ಎಂದು ಮಂಜುಷಾ ತಾಯಿ ತಿಳಿಸಿದ್ದಾರೆ.
ಮೊನ್ನೆಯಷ್ಟೇ ತಮ್ಮ ಅಪಾರ್ಟಮೆಂಟ್ ನಲ್ಲಿ ಬಿದಿಶಾ ಡಿ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದರು. 21 ವರ್ಷದ ಈ ನಟಿ ಕಂ ಮಾಡೆಲ್ ಸಾವಿಗೆ ಇಡೀ ಮಾಡೆಲಿಂಗ್ ಜಗತ್ತು ಕಂಬನಿ ಮಿಡಿದಿತ್ತು. ಡೆತ್ನೋಟ್ ಬರೆದಿಟ್ಟಿದ್ದ ನಟಿ ವೃತಿ ಅವಕಾಶಗಳ ಕೊರತೆಯಿಂದ ಆತ್ಮಹತ್ಯೆ ಶರಣಾಗುತ್ತಿರುವುದಾಗಿ ಬರೆದಿದ್ದರು.
ಕಳೆದ ಇಪ್ಪತ್ತು ದಿನಗಳ ಅಂತರದಲ್ಲಿ ಒಟ್ಟು ಐದು ಮಾಡೆಲ್ ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಡೆಲ್ಗಳ ಸರಣಿ ಆತ್ಮಹತ್ಯೆಯಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಅಘಾತಕ್ಕೊಳಗಾಗಿದೆ.