ಶ್ರೀರಂಗಪಟ್ಟಣದ ಬಳಿಯ ನಿಮಿಷಾಂಭ ದೇಗುಲದ ಬಳಿ ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರು ಪತ್ತೆಯಾಗಿದೆ. ಕಾರು ನದಿಯಲ್ಲಿರುವ ಬಗ್ಗೆ ಸ್ಥಳೀಯರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರನ್ನು ನದಿಯಿಂದ ಹೊರ ತೆಗೆಸಿ ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಅಚ್ಚರಿ ವಿಚಾರವೊಂದು ತಿಳಿದುಬಂದಿದೆ. ತಾಯಿ ಸಾವಿನ ಬಳಿಕ ಮಾನಸಿಕ ಖಿನ್ನತೆಗೊಳಗಾಗಿದ್ದ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿಯೊಬ್ಬರು ಶ್ರೀರಂಗಪಟ್ಟಣಕ್ಕೆ ಬಂದು ನದಿಯಲ್ಲಿ ಕಾರು ಮುಳುಗಿಸಿ ಹಿಂತಿರುಗಿದ್ದರು ಎಂದು ತಿಳಿದುಬಂದಿದೆ. ಬೆಂಗಳೂರಿನ ರೂಪೇಶ್ ಮಾನಸಿಕ ಖಿನ್ನತೆಗೊಳಗಾಗಿದ್ದ ವ್ಯಕ್ತಿ.
ಕಾರು ಪತ್ತೆಯಾದ ಬಳಿಕ ಮಾಲೀಕನನ್ನು ಪೊಲೀಸರು ಪಟ್ಟಣ ಠಾಣೆಗೆ ಕರೆಸಿದ್ದರು. ಈ ವೇಳೆ ಮನಬಂದಂತೆ ರೂಪೇಶ್ ಹೇಳಿಕೆ ನೀಡುತ್ತಿದ್ದರು. ರೂಪೇಶ್ ಮಾನಸಿಕ ಖಿನ್ನತೆಗೆ ಒಳಗಾಗಿರೋ ಬಗ್ಗೆ ಪೊಲೀಸರ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ರೂಪೇಶ್ ಎಂಬುವವರಿಗೆ ಬಿಎಂಡಬ್ಲ್ಯೂ ಕಾರು ಸೇರಿದ್ದಾಗಿತ್ತು. ರೂಪೇಶ್ನ ವಿಳಾಸ ಮತ್ತು ನಂಬರ್ ಪತ್ತೆ ಹಚ್ಚಿದ ಪೊಲೀಸರಿಗೆ ಅಚ್ಚರಿಯಾಗಿತ್ತು. ತನ್ನ ತಾಯಿಯ ಸಾವನ್ನು ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದ. ತನ್ನ ತಾಯಿ ಬಹುವಾಗಿ ಇಷ್ಟಪಡುತ್ತಿದ್ದ ಕಾರನ್ನು ನೀರಿನಲ್ಲಿ ಬಿಟ್ಟು ತಾಯಿಯ ಆತ್ಮಕ್ಕೆ ರೂಪೇಶ್ ಶಾಂತಿ ಕೋರಿದ್ದರೆಂದು ತಿಳಿದು ಬಂದಿದೆ.
ಬಿಎಂಡಬ್ಲ್ಯೂ ಕಾರಿನ ಮಾಲೀಕ ರೂಪೇಶ್ ನನ್ನು ಪೊಲೀಸರು ಪ್ರಶ್ನೆ ಮಾಡಿದಾಗ ಬೇರೆ ಬೇರೆ ಉತ್ತರವನ್ನು ನೀಡುತ್ತಿದ್ದ. ಗೊಂದಲಕರ ಹೇಳಿಕೆಯನ್ನು ನೀಡುತ್ತಿದ್ದ. ಶ್ರೀರಂಗ ಪಟ್ಟಣ ಪೊಲೀಸರು ರೂಪೇಶ್ ಚಲನವಲನ ಮಾತನ್ನು ಗಮನಿಸಿ ಆತ ಮಾನಸಿಕ ಖಿನ್ನತೆಗೆ ಒಳಗಾಗಿರುವುದನ್ನು ಖಚಿತಪಡಿಸಿಕೊಂಡು ರೂಪೇಶ್ ಕುಟುಂಬಕ್ಕೆ ಮಾಹಿತಿಯನ್ನು ನೀಡಿದ್ದಾರೆ.