ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 64ನೇ ವರ್ಷದ ವಾರ್ಷಿಕ ಚುನಾವಣೆಯ ಫಲಿತಾಂಶ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪ್ರಕಟವಾಗಿದ್ದು, ಭಾಮಾ ಹರೀಶ ಬಣ ಭರ್ಜರಿ ಜಯಗಳಿಸಿದೆ. ಹಾಗೂ ನೂತನ ಅಧ್ಯಕ್ಷರಾಗಿ ಭಾ ಮಾ ಹರೀಶ ಆಯ್ಕೆಯಾಗಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ನಿರ್ಮಾಪಕರಾದ ಭಾಮಾ ಹರೀಶ ಮತ್ತು ಸಾರಾ ಗೋವಿಂದು ಗುಂಪುಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಫಲಿತಾಂಶ ಪ್ರಕಟವಾಗಿದ್ದು, ಭಾಮಾ ಹರೀಶ ಬಣಕ್ಕೆ ಭರ್ಜರಿ ಜಯ ದೊರಕಿದ್ದು, ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಭಾ ಮಾ ಹರೀಶ ಅವರು ಆಯ್ಕೆಯಾಗಿದ್ದಾರೆ.
ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ಮತದಾನ ನಡೆಯಿತು. ಭಾಮಾ ಹರೀಶ ಮತ್ತು ಸಾರಾ ಗೋವಿಂದು ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ 410 ಮತಗಳ ಅಂತರದಿಂದ ಭಾಮಾ ಹರೀಶ ಜಯಗಳಿಸಿದ್ದಾರೆ. ಸಾರಾ ಗೋವಿಂದು 371 ಮತ ಗಳಿಸಿದರೆ, ಭಾ ಮಾ ಹರೀಶ್ 781 ಮತ ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.